ಕೆನರಾ ಜುಬಿಲಿ ಎಜುಕೇಶನ್ ಫಂಡ್ ಇದರ ವತಿಯಿಂದ ಕೊಡಮಾಡುವ ದತ್ತಿನಿಧಿ ಬಹುಮಾನವನ್ನು ಸರಕಾರಿ ಪ್ರೌಢ ಶಾಲೆ ಎಲಿಮಲೆ ಇಲ್ಲಿಯ ವಿದ್ಯಾರ್ಥಿನಿಯರಾದ ಹಿತಾಶ್ರೀ , ಮೇಘನಾ, ಯಶ್ಮಿತಾ , ಜಯಶ್ರೀ ಇವರು ಪಡೆದು ಕೊಂಡಿರುತ್ತಾರೆ. ಬಹುಮಾನವನ್ನು ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲ್ ಇವರು ವಿತರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ, ತಿರುಮಲೇಶ್ವರಿ, ವಸಂತ ನಾಯಕ್, ಮುರಳೀಧರ ಪಿಜೆ ಹಾಗೂ ಸಂಗೀತ ಉಪಸ್ಥಿತರಿದ್ದರು. ಬಹುಮಾನ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಪುಸ್ತಕವನ್ನು ಒಳಗೊಂಡಿದೆ.