ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ, ಕೊಲ್ಲಮೊಗ್ರು ಇದರ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯಪ್ರಕಾಶ್ ಕಟ್ಟ ಆಯ್ಕೆಯಾಗಿದ್ದಾರೆ.
ಪದ್ಮಯ್ಯ ಕೊಳಗೆ ಸೂಚಿಸಿ, ವೇದಾವತಿ ಮುಳ್ಳುಬಾಗಿಲು ಅನುಮೋದಿಸಿದರು. ವ್ಯವಸ್ಥಾಪನಾ ಸದಸ್ಯರಾದ
ಹರ್ಷ ಅಡ್ನೂರುಮಜಲು, ಚಂದ್ರಶೇಖರ ಕೊಂದಾಳ ಮನೆ, ಹೇಮಂತ್ ಚಾಳೆಪ್ಪಾಡಿ, ವಿಶ್ವನಾಥ ಕೊಮ್ಮಮನೆ, ಪದ್ಮಾವತಿ ಬಾಳೆಬೈಲು, ಹಾಗೂ ಅರ್ಚಕ ಕೃಷ್ಣಮೂರ್ತಿ ಇದ್ದರು. ದೇವಸ್ಥಾನದ ಆಡಳಿತಾಧಿಕಾರಿ ಕೊಲ್ಲಮೊಗ್ರು ಗ್ರಾ.ಪಂ ನ ಪಿಡಿಒ ರವಿಚಂದ್ರ ಅಧ್ಯಕ್ಷರ ಆಯ್ಕೆ ನಡೆಸಿಕೊಟ್ಟರು .