ಬೆಳ್ಳಾರೆ ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಮಾ.9 ರಂದು ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಮೇಲ್ವಿಚಾರಕ ಮಹೇಶ್, ಒಕ್ಕೂಟದ ಅಧ್ಯಕ್ಷ ಪೂರ್ಣಿಮ ಪೆರುವಾಜೆ,ಎನ್.ಜಿ.ಆರ್.ಒ ದ ತಾಲೂಕು ಐಇಸಿ ನಮಿತಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭವ್ಯ,ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರೀ ,ನಸೀಮಾ ,ಒಕ್ಕೂಟದ ಎಂ.ಬಿ.ಕೆ . ಶ್ರೀಮತಿ ಗೀತಾ ಪ್ರೇಮ್,ಎಲ್.ಸಿ.ಆರ್.ಪಿ.ಕು.ಉಷಾ, ಶ್ರೀಮತಿ ಶಕಿಲಾ ವೈ.ಶೆಟ್ಟಿ ಉಪಸ್ಥಿತರಿದ್ದರು.
ಪೂರ್ಣಿಮಾ ಪಡ್ಪು ಸ್ವಾಗತಿಸಿ,ಶಕಿಲಾ ವಂದಿಸಿದರು.