ಜಾಲ್ಸೂರು : ಹದಿನಾಲ್ಕನೇ ಹಣಕಾಸು ಯೋಜನೆ ಗ್ರಾಮಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜಾಲ್ಸೂರು ಗ್ರಾಮ ಪಂಚಾಯತಿಯ 2020-21ನೇ ಸಾಲಿನ ಎಂ.ಜಿ. ಎನ್.ಆರ್.ಇ.ಜಿ.ಎ. ಯೋಜನೆ ಹಾಗೂ 14ನೇ ಹಣಕಾಸು ಯೋಜನೆಯ ಗ್ರಾಮಸಭೆಯು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಾ.9ರಂದು ಜರುಗಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಿನೋಬನಗರ ಅವರು ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಎಂ.ಜಿ.ಎನ್.ಜಿ.ಎ.ಯ ತಾಲೂಕು ಸಂಯೋಜಕ ಪ್ರವೀಣ್ ಅವರು ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಕಳೆದ 01-10-2019ರಿಂದ 30-9-2020ರ ವರೆಗೆ ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಂತಹ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯನ್ನು ದಿನಾಂಕ 07-12-2020ರಿಂದ 11-12-2020ರವರೆಗೆ ವಿಶೇಷ ಸಾಮಾಜಿಕ ಪರಿಶೋಧನೆ ತಂಡದವರ ಮೂಲಕ ನಡೆಸಲಾಗಿದ್ದು, ಈ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶಿವಪ್ರಸಾದ್ ಕುಕ್ಕಂದೂರು, ಶ್ರೀಮತಿ ಅಂಬಿಕಾ, ಅಬ್ದುಲ್ ಮಜೀದ್ ನಡುವಡ್ಕ, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಶ್ರೀಮತಿ ತಿರುಮಲೇಶ್ವರಿ ಮರಸಂಕ, ಶ್ರೀಮತಿ ಸಂಧ್ಯಾ ವಾಗ್ಲೆ, ತೋಟಗಾರಿಕಾ ಇಂಜಿನಿಯರ್ ಆಕಾಂಕ್ಷ ಸೇರಿದಂತೆ ಸ್ವಸಹಾಯ ಸಂಘದ ಪದಾಧಿಕಾರಿಗಳು, ನರೇಗಾ ಯೋಜನೆಯ ಫಲಾನುಭವಿಗಳು ಗ್ರಾಮಸ್ಥರು, ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.