ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ (DYES)ಕರ್ನಾಟಕ ಸರ್ಕಾರ ಹಾಗೂ ವಿಜಯನಗರ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮೋಟಾರ್ ಸ್ಪೋರ್ಟ್ಸ್ ವಿಭಾಗದ ಸಾಧನೆಗಾಗಿ ಕ್ರೀಡಾಪಟು ಕು.ಅರ್ಪಿತಾ ವಿ.ಎಂ.ರವರನ್ನು ಮಾ.08ರಂದು ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಪುರಸ್ಕರಿಸಲಾಯಿತು. ಈಕೆ ಮರ್ಕಂಜ ಗ್ರಾಮದ ಮೈರಾಜೆ ವೆಂಕಟೇಶ್ವರ ಭಟ್ ಹಾಗೂ ಭಾರತಿ ದಂಪತಿಯ ಪುತ್ರಿ.