Breaking News

ಅಡಿಕೆ ಕೊಯ್ಯುವ ವೇಳೆ ಕತ್ತಿ ತಾಗಿ ಗಾಯಗೊಂಡು ಯುವಕ ಮೃತ್ಯು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಡಿಕೆ ಕೊಯ್ಯುವ ಸಂದರ್ಭ ಗಳೆಗೆ ಕಟ್ಟಿದ ಕತ್ತಿ ಜಾರಿ ಬಂದು ತೊಡೆಗೆ ಗಾಯವಾಗಿ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕುಕ್ಕುಜಡ್ಕದಿಂದ ವರದಿಯಾಗಿದೆ.
ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಕಾಲನಿ ನಿವಾಸಿ ಬಾಬು ಎಂಬವರ ಪುತ್ರ ಸಂದೇಶ್ ಕೆ. ಎಂಬ ಅವಿವಾಹಿತ ಯುವಕ ಘಟನೆಯಲ್ಲಿ ಮೃತಪಟ್ಟವರು.
ನಿನ್ನೆ ಸುಳ್ಯದ ಪೈಚಾರಿನ ಪಿಲಿಕೋಡಿ ಕಾಲನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಅಡಿಕೆ ಮರಕ್ಕೆ ಏರಿ ಅಡಿಕೆ ಕೊಯ್ಯುವಾಗ ಗಳೆಗೆ ಕಟ್ಟಿದ್ದ ಕತ್ತಿಯು ಜಾರಿ ಬಂದು ಸಂದೇಶ ರವರ ತೊಡೆಯನ್ನು ಸೀಳಿತು. ಈ ವೇಳೆಯಲ್ಲಿ ಸಂದೇಶ ಮರದಿಂದ ಕೆಳಗೆ ಬಿದ್ದರು. ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ವಿಪರೀತ ಪ್ರಮಾಣದಲ್ಲಿ ರಕ್ತ ಸ್ರಾವವಾದುದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರ ತಾಯಿ ಗಿರಿಜಾ ರವರು ಸುಮಾರು ೬ ವರ್ಷಗಳ ಹಿಂದೆ ಸಿಡಿಲು ಬಡಿದು ಸಾವಿಗೀಡಾಗಿದ್ದರು. ಮೃತರು ಚಿಕ್ಕಮ್ಮ ಸುಂದರಿ, ಸಹೋದರಿಯರಾದ ಸೌಮ್ಯ, ಭುವನೇಶ್ವರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸಂದೇಶ್‌ರ ತಂದೆ ಬಾಬು ರವರು ಅಡಿಕೆ ಕೊಯ್ಯುವ ವೃತ್ತಿ ಮಾಡುತ್ತಿದ್ದು, ಸಂದೇಶ ರವರು ಟೈಲ್ಸ್ ಹಾಕುವ ಮತ್ತು ಮೆಷಿನ್ ನಲ್ಲಿ ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.