ಚೆನ್ನಾವರ :ಕ್ರಿಕೆಟ್ ಪಂದ್ಯಾಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಒಂದು ವರ್ಷದೊಳಗೆ ರಸ್ತೆ ಅಭಿವೃದ್ಧಿ : ದಿನೇಶ್ ಮೆದು

ಪಾಲ್ತಾಡಿ- ಚೆನ್ನಾವರ- ಕುಂಡಡ್ಕ ಸಂಪರ್ಕ ರಸ್ತೆಯನ್ನು ‌ಮುಂದಿನ ಒಂದು ವರ್ಷದ ಒಳಗೆ ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವುದಾಗಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು.

ಚೆನ್ನಾವರ ಫ್ರೆಂಡ್ಸ್ ಆಶ್ರಯದಲ್ಲಿ ಅಭ್ಯುದಯ ಯುವಕ ಮಂಡಲ ಸಹಯೋಗದೊಂದಿಗೆ ಚೆನ್ನಾವರ ಕಿ.ಪ್ರಾ.ಶಾಲಾ ಆವರಣದಲ್ಲಿ ಹೊನಲು ಬೆಳಕಿನ ಮುಕ್ತ ಕ್ರಿಕೆಟ್ ಪಂದ್ಯಾಟದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಸಚಿವರು, ಸಂಸದರ ಸಹಕಾರ ಪಡೆದು ಈ ಭಾಗದ ಬಹು ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಕ್ರೀಡಾ ಸ್ಪರ್ದೆಗಳ ಮೂಲಕ ಊರಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯ ಎಂದರು.

ಕ್ರೀಡಾಕೂಟ ಉದ್ಘಾಟಿಸಿದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಈ ಭಾಗದ ಜನರ ರಸ್ತೆ ನಿರ್ಮಾಣದ ಬೇಡಿಕೆಗೆ ಅಗತ್ಯ ಅನುದಾನ ಒದಗಿಸಲು ಎಲ್ಲ ಸ್ತರದ ಜನಪ್ರತಿನಿಧಿಗಳೊಂದಿಗೆ ಪಂಚಾಯತ್ ಆಡಳಿತವು ಸಹಕಾರ ನೀಡಲಿದೆ ಎಂದ ಅವರು, ಚೆನ್ನಾವರದ ಸಾಮರಸ್ಯ, ಸೌಹಾರ್ದತೆ ಕ್ರೀಡೆಯ ಮೂಲಕ ಹತ್ತೂರಿಗೆ ಪಸರಿಸಲಿ ಎಂದರು.

ಗ್ರಾ.ಪಂ.ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಮಾತನಾಡಿ, ರಸ್ತೆ ಅಭಿವೃದ್ಧಿ ಅತಿ ಅಗತ್ಯವಾಗಿದ್ದು ಇದಕ್ಕೆ ಸ್ಪಂದಿಸಬೇಕಾದದ್ದು ಜನಪ್ರತಿನಿಧಿಗಳ ಜವಬ್ದಾರಿ ಎಂದರು.

ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಚೆನ್ನಾವರ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಹನೀಪ್ ಇಂದ್ರಾಜೆ, ಶಾಲಾ ಮುಖ್ಯಗುರು ಶಾಂತಾ ಕುಮಾರಿ, ಪಾಲ್ತಾಡಿ ನ್ಯೂ ಬ್ರದರ್ಸ್ ಗೌರವಾಧ್ಯಕ್ಷ ಸುನಿಲ್ ರೈ, ಅಧ್ಯಕ್ಷ ಹನೀಪ್ ಕುಂಡಡ್ಕ, ಕೆಯ್ಯೂರು ಗ್ರಾ.ಪಂ.ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಮಾಜಿ ಸದಸ್ಯ ಹನೀಪ್ ಮಾಡಾವು, ಕೃಷಿಕ ಸಿ.ಪಿ.ಅಬ್ದುಲ್ಲಾ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಚೆನ್ನಾವರ ಕಿ.ಪ್ರಾ.ಶಾಲೆಯ ಪ್ರಾರಂಭಿಕ ಹಂತದ ಶಿಕ್ಷಕ ಚಂದ್ರನಾಥ ಅವರನ್ನು ಸಮ್ಮಾನಿಸಲಾಯಿತು.

ಅಭ್ಯುದಯ ಯುವಕ ಮಂಡಲದ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಇಕ್ಬಾಲ್ ಚೆನ್ನಾವರ ವಂದಿಸಿದರು. ಉದ್ಯಮಿ ಶಾಫಿ ಚೆನ್ನಾವರ, ಲತೀಪ್ ಚೆನ್ನಾವರ ಹಾಗೂ ಶರೀಪ್ ಕುಂಡಡ್ಕ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.