ಹಿರಿಯ ಕಾಂಗ್ರೆಸ್ ನಾಯಕ, ಸಹಕಾರಿ ಧುರೀಣ ಹಾಜಿ ಬೀರಾಮೊಯಿದೀನ್ ರವರ ನಿಧನಕ್ಕೆ ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತ ಪಡಿಸಿರುತ್ತಾರೆ.
ಕನಕಮಜಲು ಗ್ರಾ.ಪಂ. ಅಧ್ಯಕ್ಷರಾಗಿ ಮತ್ತು ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸುಳ್ಯ ತಾಲೂಕು ಜಮೀಯ್ಯತ್ತುಲ್ ಫಲಾದ ಸ್ಥಾಪಕಾಧ್ಯಕ್ಷರಾಗಿ, ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ನಿರ್ದೇಶಕರಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಬೀರಾಮೊಯಿದೀನ್ ಅವರ ನಿಧನದಿಂದ ಮುಸ್ಲಿಂ ಸಮಾಜಕ್ಕೆ ತುಂಬಲಾರದ ನಷ್ಠವಾಗಿದೆ. ಅವರ ಕುಟುಂಬದವರಿಗೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಎಂದು ಟಿ.ಎಂ.ಶಾಹೀದ್ ತಮ್ಮ ಸಂತಾಪದಲ್ಲಿ ತಿಳಿಸಿರುತ್ತಾರೆ.