ಸಾಮೂಹಿಕ ಪೂಜೆಗಳಿಂದ ಒಗ್ಗಟ್ಟಿನ ಸಮಾಜ ನಿರ್ಮಾಣ : ಗಬ್ಲಡ್ಕ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮೊಗ್ರ ಘಟ ಸಮಿತಿಯ ವತಿಯಿಂದ 3ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆಯು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಕೃಪಾಶೀರ್ವಾದೊಂದಿಗೆ ಇಂದು ಮೊಗ್ರ ಬಲ್ಲಾಳರ ರಾಜಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ 8ರಿಂದ ಮೊಗ್ರ ಘಟಸಮಿತಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9 ರಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ಆರಂಭ, ಮಹಾಪೂಜೆ, ಪ್ರಸಾದವಿತರಣೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ :
ದೇವರನ್ನು ಧ್ಯಾನ ಮಾಡುವಾಗ, ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಬರುವಾಗ, ದೇವರಿಗೆ ನಮಸ್ಕರಿಸುವಂತಹ ಸಂದರ್ಭಗಳಲ್ಲಿ ಸಣ್ಣ ಸಣ್ಣ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದೇವರಲ್ಲಿ ಶರಣಾಗತಿಯಾಗಬೇಕು. ಇದು ನಮ್ಮ ಮುಂದಿನ ತಲೆಮಾರಿಗೆ ದಾರಿಯಾಗುತ್ತದೆ. ಆ ಮೂಲಕ ಧರ್ಮ ಉಳಿಯುತ್ತದೆ. ಜಾತಿ ಎಂಬ ಭೇದವಿಲ್ಲದೆ ಒಟ್ಟಾಗಿ ಸೇರಿ ಮಾಡುವ ಸಾಮೂಹಿಕ ಪೂಜಾ ಕಾರ್ಯಕ್ರಮಗಳಿಂದ ಸಮಾಜ ಒಗ್ಗಾಟಗುತ್ತದೆ ಎಂದು ಆಹಾರೋದ್ಯಮಿ ಹಾಗೂ ಪ್ರಗತಿಪರ ಕೃಷಿಕ ಲಕ್ಷ್ಮೀಶ ಗಬ್ಲಡ್ಕ ಹೇಳಿದರು. ಅವರು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮೊಗ್ರ ಘಟಸಮಿತಿ ಅಧ್ಯಕ್ಷ ರಘುವೀರ್ ಎಂ.ಆರ್. ಅಧ್ಯಕ್ಷ ತೆ ವಹಿಸಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಶಾಖೆ ಒಡಿಯೂರು ಇದರ ನಿರ್ದೇಶಕಿ ಶ್ರೀಮತಿ ಶಾರದಾಮಣಿ ಎಸ್ಡಿ.ರೈ ಉದ್ಘಾಟಿಸಿದರು. ವೇದಿಕೆಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಒಡಿಯೂರು ಇದರ ನಿರ್ದೇಶಕ ಕಿರಣ್ ಊರ್ವ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ತಾಲೂಕು ಇದರ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಮೊಗ್ರ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಮೊಗ್ರ ದೈವಸ್ಥಾನದ ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ದಕ್ಷಿಣ ವಲಯದ ಸುಳ್ಯ ತಾಲೂಕು ಅಧ್ಯಕ್ಷ ಉಮೇಶ ಆಚಾರ್ಯ, ಗುತ್ತಿಗಾರು ಗ್ರಾ.ಪಂ. ಸದಸ್ಯವಸಂತ ಮೊಗ್ರ, ಶಿವದಾಸ್ ಉಪಸ್ಥಿತರಿದ್ದರು. ಸೇವಾದೀಕ್ಷಿತೆ ಪ್ರೀತಿ ಮೊಗ್ರ ವರದಿ ಮಂಡಿಸಿದರು. ಸಮೃದ್ಧಿ ತಂಡದ ಸದಸ್ಯೆ ಜಯಂತಿ ಸ್ವಾಗತಿಸಿದರು. ಸಂಯೋಜಕಿ ಶ್ರೀಮತಿ ಹರಿಣಿಯವರು ಕಾರ್ಯಕ್ರಮ ನಿರೂಪಿಸಿದರು.
ಭಗವತಿ ಸಂಘದ ಸದಸ್ಯ ಮಧುಕರ ವಂದಿಸಿದರು. ಸೇವಾದೀಕ್ಷಿತೆಯರಾದ ಶ್ರೀಮತಿ ಸವಿತಾ, ಶ್ರೀಮತಿ ಜ್ಯೋತಿ, ಪವಿತ್ರ ಜಾಲ್ಸೂರು, ಬಾವನ ಗುತ್ತಿಗಾರು, ಪುಷ್ಪಲತಾ ಬಳ್ಪ, ಘಟ ಸಮಿತಿಯ ಉಪಾಧ್ಯಕ್ಷ ಧರ್ಮಪಾಲ ಗೌಡ, ಕಾರ್ಯದರ್ಶಿ ಸುದೀಶ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪರಮೇಶ್ವರಿ, ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಸುರೇಶ್ ಮೊಗ್ರ, ಉಪಾಧ್ಯ ಕ್ಷ ಜಯಂತಿ ಉಮ್ಮಡ್ಕ, ಕಾರ್ಯದರ್ಶಿ ಅಭಿಲಾಷ್ ಮಲ್ಕಜೆ, ಜೊತೆ ಕಾರ್ಯದರ್ಶಿ ಯೋಗೀಶ್ ಎಂ. ಮುತ್ಲಾಜೆ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಮಾಲತಿ ಎಂ. ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.