ಹರಿಹರ ಪಲ್ಲತಡ್ಕ ಗ್ರಾ.ಪಂ. ನ ಹರಿಹರ ಪಲ್ಲತಡ್ಕ ಪೇಟೆಯಲ್ಲಿ ಮದ್ಯ ಮಾರಾಟ ಕೇಂದ್ರ ಸ್ಥಾಪಿಸಲು ಪ್ರಯತ್ನಿಸಿದ್ದು, ಅದಕ್ಕೆ ಅವಕಾಶ ಮಾಡಿಕೊಡ ಬಾರದೆಂದು ಸಾರ್ವಜನಿಕರು ಗ್ರಾ.ಪಂ. ಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಹರಿಹರ ಗ್ರಾ.ಪಂ. ಗೆ ಎರಡು ಮನವಿಗಳು ಬಂದಿದ್ದು, 1994 ರಲ್ಲಿ ಹರಿಹರ ಮದ್ಯ ಮುಕ್ತ ಗ್ರಾಮ ಎಂದು ನಿರ್ಣಯವಾಗಿದ್ದು ಅದರಂತೆ ಮುಂದುವರೆಯಬೇಕಾಗಿ ಮನವಿಯಲ್ಲಿ ಕೋರಲಾಗಿದೆ. ಇದಲ್ಲದೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್, ತಾ.ಪಂ, ಉಸ್ತುವಾರಿ ಸಚಿವರಿಗೆ ಮನವಿ ಕಳುಹಿಸಿಲಾಗಿದೆ ಎಂದು ತಿಳಿದು ಬಂದಿದೆ.