ಕೊಲ್ಲಮೊಗ್ರ ಮಯೂರ ಕಲಾ ಮಂದಿರದಲ್ಲಿ ಅಮೃತ ಗೊಂಚಲು ಮಹಾಸಭೆ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ.10 ರಂದು ನಡೆಯಿತು.
ಅಮೃತ ಗೊಂಚಲು ಸಭೆಯ ಅಧ್ಯಕ್ಷರಾದ ಹರ್ಷಿಣಿಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಲ್ಲಮೊಗ್ರ ವಲಯದ ಮೇಲ್ವಿಚಾರಕಿಯವರಾದ ವಿಜಯ ಜೆ. ಡಿ., ಸುಬ್ರಹ್ಮಣ್ಯ ವಲಯದ ಗೊಂಚಲು ಅಧ್ಯಕ್ಷೆ ರತ್ನ ಕುಮಾರಿ, ಕೊಲ್ಲಮೊಗ್ರ ಗ್ರಾ. ಪಂ. ಉಪಾದ್ಯಾಕ್ಷೆ ಜಯಶ್ರೀ, ಗೊಂಚಲು ಸಭೆಯ ಕಾರ್ಯದರ್ಶಿಯವರಾದ ಮಮತ, ಜತೆ ಕಾರ್ಯದರ್ಶಿಯಾವರಾದ ಶಾರದರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಲ್ಲಮೊಗ್ರ ವಲಯದ ಮೇಲ್ವಿಚಾರಕಿಯವರಾದ
ವಿಜಯ ಜೆ ಡಿ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿದ ಸ್ಪರ್ಧೆ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮಮತರವರು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ವಂದಿಸಿದರು. ಅಶ್ವಿನಿಯವರು ಕಾರ್ಯಕ್ರಮ ನಿರೂಪಿಸಿದರು.