ಸ್ತ್ರೀ ರೋಗ ತಜ್ಞೆ ಡಾ.ವೀಣಾರವರು ಬರೆದ ಭಾವಾರ್ಣವ ಮತ್ತು ಸ್ತ್ರೀ ಸ್ವಾಸ್ಥ್ಯ ಪುಸ್ತಕಗಳ ಲೋಕಾರ್ಪಣೆ

Advt_Headding_Middle
Advt_Headding_Middle

 

 

ಸುಳ್ಯದ ಹೆಸರಾಂತ ಸ್ತ್ರೀ ರೋಗ ತಜ್ಞೆ ಹಾಗೂ ಬರಹಗಾರ್ತಿ ಡಾ. ವೀಣಾರವರು ರಚಿಸಿದ ಭಾವಾರ್ಣವ ಕವನ ಸಂಕಲನ ಹಾಗೂ ಸ್ತ್ರೀ ಸ್ವಾಸ್ಥ್ಯ ಆರೋಗ್ಯ ಮಾಹಿತಿ ಪುಸ್ತಕಗಳ ಲೋಕಾರ್ಪಣೆಯು (ಮಾ. 11ರಂದು) ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಂಭ್ರಮ ಹಾಲ್‌ನಲ್ಲಿ ನಡೆಯಿತು.

ಉಡುಪಿಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಪಾದೆಕಲ್ಲು ವಿಷ್ಣು ಭಟ್ಟರವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾವಾರ್ಣವ ಕೃತಿಯನ್ನು ಬೆಂಗಳೂರಿನ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಲೋಕಾರ್ಪಣೆ ಮಾಡಿದರೆ, ಸ್ತ್ರೀ ಸ್ವಾಸ್ಥ್ಯ ಕೃತಿಯನ್ನು ರಾಜ್ಯ ಐಎಂಎಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಬಿಡುಗಡೆಗೊಳಿಸಿದರು.

ಅತಿಥಿಗಳಾಗಿ ಕನ್ನಡ ಚಿಂತಕ ಪ್ರೊ.ಮಧುಸೂದನ ಕೆ.ಎಸ್., ಭಾರತೀಯ ವೈದ್ಯಕೀಯ ಸಂಘದ ಸುಳ್ಯ ಘಟಕದ ಅಧ್ಯಕ್ಷ ಡಾ.ಶ್ರೀಕೃಷ್ಣ ಭಟ್ ಬಿ.ಎನ್., ಕ.ಸಾ.ಪ. ಸುಳ್ಯ ಘಟಕದ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕ.ಸಾ.ಪ. ಬಂಟ್ವಾಳ ಘಟಕದ ಅಧ್ಯಕ್ಷ ಮೋಹನ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.