‘ಊರಿಗೆ ಬರಲಾಗದೆ ದುಬೈಯಲ್ಲಿ ಸಂಕಷ್ಟದಲ್ಲಿರುವ ಮಹಿಳೆ’ ವರದಿಗೆ ಭಾರಿ ಸ್ಪಂದನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ವಿವಿಧ ಸಂಘಟನೆಗಳಿಂದ ಹುಡುಕಾಟ

ಕೆಸಿಎಫ್ ಅಧ್ಯಕ್ಷರಿಂದ ತಾಯಿಯ ಭೇಟಿ

ಕನಕಮಜಲಿನ ಮಹಿಳೆಯೊಬ್ಬರು ದುಬೈಗೆ ಹೋಗಿ ಕೆಲಸವೂ ಇಲ್ಲದೆ, ಹಿಂತಿರುಗಿಯೂ ಬರಲಾರದೆ ಕಷ್ಟಪಡುತ್ತಿದ್ದಾರೆಂದು ವರದಿ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಿದ್ದು, ಅದಕ್ಕೆ ಭಾರಿ ಜನಸ್ಪಂದನೆ ವ್ಯಕ್ತವಾಗಿದೆ. ಆ ಮಹಿಳೆಯನ್ನು ದುಬೈಯಲ್ಲಿ ಹುಡುಕಿ ಕರೆತರುವ ಪ್ರಯತ್ನಕ್ಕೆ ಕೆಲವು ಸಂಘಟನೆಯವರು ತೊಡಗಿದ್ದು, ಕೆಲವರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದೆ. ದುಬೈಯ ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಅಧ್ಯಕ್ಷ ಕನಕಮಜಲಿಗೆ ಬಂದು ಮಹಿಳೆಯ ತಾಯಿಯನ್ನು ಭೇಟಿಯಾಗಿದ್ದು, ದುಬೈಯಲ್ಲಿ ತೊಂದರೆಗೊಳಗಾಗಿರುವ ಮಹಿಳೆಯನ್ನು ಪತ್ತೆ ಹಚ್ಚಿ ಊರಿಗೆ ತರಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ದುಬೈ ಅಬುದಾಬಿಯಲ್ಲಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಧ್ಯಕ್ಷ ಹಸೈನಾರ್ ಅಮಾನಿ ಅವರು ತಮ್ಮ ಊರಾದ ಅಜ್ಜಾವರಕ್ಕೆ ಬಂದಿದ್ದು, ಸುದ್ದಿ ವರದಿ ನೋಡಿದ ಅವರು ಮಾ. 10 ರಂದು ಕನಕಮಜಲುಗೆ ಹೋಗಿ ತೇಜಪ್ರಕಾಶ್ ಬುಡ್ಲೆಗುತ್ತುರವರ ಮನೆಯಲ್ಲಿ ದುಬೈಯಲ್ಲಿರುವ ಮಹಿಳೆಯ ತಾಯಿಯೊಡನೆ ಮಾತನಾಡಿದ್ದಾರೆ. ಅವರು ಮಗಳನ್ನು ಪತ್ತೆ ಹಚ್ಚಿ ಊರಿಗೆ ಕರೆತರುವ ಭರವಸೆ ನೀಡಿದ್ದಾರೆ.
ದುಬೈಯಲ್ಲಿರುವ ಕೆಸಿಎಫ್ ಪದಾಧಿಕಾರಿ ಜೈನುದ್ದೀನ್ ಬೆಳ್ಳಾರೆಯವರು ಮಹಿಳೆಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ದುಬೈಯಲ್ಲಿರುವ ಹರೀಶ್ ಕೋಡಿ ಎಂಬವರು ಮಹಿಳೆ ಕೆಲಸ ಮಾಡುವ ಸ್ಥಳ ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ.
ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಫಾರಂ ಕರ್ನಾಟಕ ಇದರ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಜೀಪ ಎಂಬವರು ಸುದ್ದಿಗೆ ಕರೆ ಮಾಡಿ ತಮ್ಮ ಸಂಘಟನೆಯ ಪದಾಧಿಕಾರಿಗಳು ದುಬೈಯಲ್ಲಿ ಆ ಮಹಿಳೆ ಇರುವ ಸ್ಥಳ ಪತ್ತೆ ಹಚ್ಚಿದ್ದು, ಅವರನ್ನು ಊರಿಗೆ ಕರೆ ತರಲು ನೆರವು ನೀಡುವುದಾಗಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.