ಕುಂಡಡ್ಕ -ಅಡ್ಯತಕಂಡ ರಸ್ತೆಯ ಆಯ್ದ ಭಾಗದ ಕಾಂಕ್ರೀಟ್ ಕಾಮಗಾರಿಗೆ ಜಿ.ಪಂ. ಮೂಲಕ 2.5 ಲಕ್ಷ ರೂ.ಅನುದಾನ ನೀಡಲಾಗಿದ್ದು ರಸ್ತೆ ಕಾಮಗಾರಿ ಪೂರ್ಣಗೊಂಡು ಬಹುಕಾಲದ ಬೇಡಿಕೆ ಈಡೇರಿದೆ. ಮುಂದಿನ ದಿನಗಳಲ್ಲಿ ರಸ್ತೆಯ ಉಳಿದ ಭಾಗದ ಅಭಿವೃದ್ಧಿ ಅನುದಾನ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಬೆಳ್ಳಾರೆ ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಹೇಳಿದರು.
ಪೆರುವಾಜೆ ಗ್ರಾಮದ ಕುಂಡಡ್ಕ-ಅಡ್ಯತಕಂಡ ರಸ್ತೆಗೆ ಜಿ.ಪಂ.ನ 2.5 ಲ.ರೂ.ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಮಾ.11 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಕಾಮಗಾರಿ ಕ್ಲಪ್ತ ಸಮಯದಲ್ಲಿ ಪೂರ್ಣಗೊಂಡಿದ್ದು ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ರಸ್ತೆ ದೀರ್ಘ ಕಾಲ ಬಾಳಿಕೆ ಬರುವ ಹಾಗೆ ನಿರ್ವಹಣೆ ಜವಬ್ದಾರಿ ಕಡೆಗೆ ಫಲಾನುಭವಿಗಳು ಗಮನ ಹರಿಸಬೇಕು ಎಂದರು.
ಕುಶಾಲಪ್ಪ ಗೌಡ ಪೆರುವಾಜೆ ಮಾತನಾಡಿ, ಕುಂಡಡ್ಕ-ಅಡ್ಯತಕಂಡ ರಸ್ತೆಯ ಪ್ರಾರಂಭಿಕ ಹಂತದ ಡಾಮರು ಕಾಮಗಾರಿಗೆ ಮೊದಲ ಅವಧಿಯಲ್ಲಿ ಜಿ.ಪಂ.ಸದಸ್ಯರಾಗಿದ್ದ ವೇಳೆ ಎಸ್.ಎನ್.ಮನ್ಮಥ ಅವರು ಅನುದಾನ ನೀಡಿದ್ದರು. ಈಗ ಎರಡನೆ ಅವಯಲ್ಲಿಯು ಈ ರಸ್ತೆಯ ಉಳಿದ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದರು.
ರಸ್ತೆ ಫಲಾನುಭವಿಗಳ ವತಿಯಿಂದ ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಅವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಉಮೇಶ್ ಕೆಎಂಬಿ, ಐತ್ತಪ್ಪ ನಾಯ್ಕ ಕುಂಡಡ್ಕ, ಇಸ್ಮಾಯಿಲ್ ಕುಂಡಡ್ಕ, ಐರ್ವನಾಡು ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗುತ್ತಿಗೆದಾರ ಪ್ರಕಾಶ್, ಸ್ಥಳೀಯರಾದ ಸುರೇಶ್, ಉಮ್ಮರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.