Breaking News

ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ – ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ಪದೋನ್ನತಿಗೊಂಡು ಏನೆಕಲ್ಲು ಪ್ರೌಢಶಾಲೆಗೆ ವರ್ಗಾವಣೆ ಗೊಂಡಿರುವ ದೀಪಾ ಕಠಾರೆಯವರಿಗೆ ಹಾಗೂ ಈ ಹಿಂದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಅತಿಥಿ ಶಿಕ್ಷಕರಿಗೆ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷರುಗಳಿಗೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ವು ಇಂದು ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಶ ಕುಚ್ಚಾಲ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಕುಶಾಲಪ್ಪ ಪಾರೆಪ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯರಾಮ ಹಾಡಿಕಲ್ಲು, ಸುಜಾತ ಹಾಡಿಕಲ್ಲು, ಶರ್ಮಿಳಾ ಕಜೆ, ಗುಣವರ್ಧನ ಸಮಿತಿ ಸದಸ್ಯ ಸೋಮಶೇಖರ ಕೇವಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಪಾಲ ತಳೂರು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಸುಗಂಧಿ ಪೆರ್ನಾಜೆ, ದೀಪಾ ಕಠಾರೆಯವರ ಪತಿ ವಾಸುದೇವ ಬಲ್ಮಲೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಡಪ್ಪಾಡಿ ಹಿ‌ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿದ್ದು, ಇದೀಗ ಪದೋನ್ನತಿ ಹೊಂದಿ ಏನೆಕಲ್ಲು ಪ್ರೌಢಶಾಲೆಗೆ ವರ್ಗಾವಣೆ ಗೊಂಡ ದೀಪಾ ಕಠಾರೆಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ 2001ರಿಂದ ಎಸ್.ಡಿ.ಎಂ.ಸಿ.‌ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗೋಪಾಲಕೃಷ್ಣ ಪಾರೆಮಜಲು, ಲೋಕೇಶ್ವರಿ ಅಂಬೆಕಲ್ಲು, ವಸಂತಿ ಕೊಡಪಾಲ, ಪುರುಷೋತ್ತಮ ಮಡಪ್ಪಾಡಿ, ಧರ್ಮಪಾಲ ತಳೂರು, ನಾಗೇಶ ಕುಚ್ಚಾಲ ಹಾಗೂ ಗ್ರಾಮದ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವಿದ್ಯಾ ಕುಚ್ಚಾಲ, ವನಜ ಕಡ್ಯ, ರೇಷ್ಮಾ ಕಡ್ಯ, ರಂಜಿತ್ ಶೀರಡ್ಕ, ಬೇಬಿ ಟೀಚರ್ ಮತ್ತು ಕೈ ತೋಟ ನಿರ್ಮಾಣ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ ಗಂಗಯ್ಯ ಪೂಂಬಾಡಿ, ಕಟ್ಟಡ ಮೇಲುಸ್ತುವಾರಿ ನೋಡಿಕೊಂಡ ಶಿಶಧರ ಕೇವಳ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು. ಪದವಿಧರ ಸಹಶಿಕ್ಷಕ ಜಗದೀಶ ವಂದಿಸಿದರು. ಗುತ್ತಿಗಾರು ಶಾಲಾ ಶಿಕ್ಷಕ ಶಶಿಧರ ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.