Breaking News

ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ : ಅಹೋರಾತ್ರಿ ಭಜನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಕುಲ್ಕುಂದ ಬಸವನಮೂಲೆ ಬಸವೇಶ್ವರ ದೇವಸ್ಥಾನದಲ್ಲಿ ಮಾ.11 ರಂದು ಮಹಾಶಿವರಾತ್ರಿ ಆಚರಣೆ ನಡೆದಿದ್ದು, ಅಹರ್ನಿಶಿ ಭಜನಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನೆ ಪ್ರಾರಂಭವಾಯಿತು. ಬೆಳಗ್ಗೆ ಶ್ರೀ ದೇವರಿಗೆ ನೂತನ ಪ್ರಭಾವಳಿ ಸಮರ್ಪಣೆ ನಡೆಯಿತು. ಬಳಿಕ ಮಹಾಮೃತ್ಯುಂಜಯ ಯಾಗ ನಡೆದು ಪೂರ್ಣಾಹುತಿ ನಡೆಯಿತು. ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡದಿದ್ದು ಸಂಜೆ ಶತರುದ್ರಾಭಿಷೇಕ, ರಾತ್ರಿ ಶ್ರೀ ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ನಡೆಯಿತು . ಮೊದಲ ದಿನ ಸೂರ್ಯೋದಯ ಸಂದರ್ಭ ಆರಂಭವಾದ ಅಹರ್ನಿಶಿ ಭಜನೋತ್ಸವ ಮರುದಿನ ಸೂರ್ಯೋದಯ ವೇಳೆ ಮಂಗಳೋತ್ಸವ ನಡೆಯಿತು. 24 ಭಜನಾ ತಂಡಗಳು ಭಜನೆಯಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಕಾರ್ಯಕ್ರಮ ಯಶಸ್ವಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸ್ಕಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ನಾಳ, ಅರ್ಚಕ ಗಣೇಶ್ ದೀಕ್ಷಿತ್ ಅಲ್ಲದೆ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳು, ಬೈಲುವಾರು ಸಮಿತಿಗಳು, ಊರ ಪರವೂರ ಭಕ್ತರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.