ಅಡಿಕೆ ಎಲೆ ಹಳದಿ ರೋಗ ಸಂಶೋಧನೆ : ಕಾಲಮಿತಿಯೊಳಗೆ ನಡೆಸಲು ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ ಒತ್ತಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕೃಷಿ ನಾಶದ ಕುರಿತು ರೈತರೇ ಮಾಹಿತಿ ನೀಡಲು ಕೇಂದ್ರಗಳ ಆರಂಭ : ಸಲಹೆ

ರಾಜ್ಯ ಬಜೆಟ್‌ನಲ್ಲಿ ಅಡಿಕೆ ಎಲೆ ಹಳದಿ ರೋಗ ಸಂಶೋಧನೆಗೆ ಸರಕಾರ ಅನುದಾನ ಇರಿಸಿರುವುದು ಸ್ವಾಗತಾರ್ಹ. ಕಾಲಮಿತಿಯೊಳಗೆ ಸಂಶೋಧನೆ ನಡೆಸಬೇಕು. ಮತ್ತು ಅಡಿಕೆ ಬೆಳೆಗಾರರಿಗೆ ಆರ್ಥಿಕ ಪುನಶ್ಚೇತನಕ್ಕೆ ಸರಕಾರ ಅನುವು ಮಾಡಿಕೊಡಬೇಕೆಂಬುದು ನಮ್ಮ ಬೇಡಿಕೆ ಇದೆ ಎಂದು ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆಯ ಸಂಚಾಲಕ ಶಿವಾನಂದ ಕುಕ್ಕುಂಬಳ ಹೇಳಿದ್ದಾರೆ.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು, ಅಡಿಕೆ ಹಳದಿ ಎಲೆ ರೋಗದಿಂದ ಈ ಭಾಗದ ಕೃಷಿಕರು ಕೈ ಸುಟ್ಟುಕೊಂಡಿದ್ದಾರೆ. ಅಡಿಕೆ ಬೆಳೆಯಿಂದ ಯಾರೂ ಹಿಂದೆ ಸರಿಯಬಾರದು. ಅಡಿಕೆ ಬೆಳೆಯನ್ನು ಉಳಿಸುವ ಉದ್ದೇಶದಿಂದ ಸುಳ್ಯದಲ್ಲಿ ಅಡಿಕೆ ಬೆಳೆ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಕೆಲವು ದಿನಗಳ ಹಿಂದೆ ತೊಡಿಕಾನದಲ್ಲಿ ಜನ ಪ್ರತಿನಿಧಿಗಳು, ವಿಜ್ಞಾನಿಗಳು, ಅಧಿಕಾರಿಗಳಿದ್ದು ಅಡಿಕೆ ಹಳದಿ ಎಲೆ ರೋಗದ ಕುರಿತು ಸಂವಾದವನ್ನು ನಡೆಸಲಾಗಿತ್ತು. ಅಡಿಕೆ ಎಲೆ ಹಳದಿ ರೋಗ ಪ್ರದೇಶದಲ್ಲಿ ವಿಜ್ಞಾನಿಗಳ ವಿಶೇಷ ತಂಡವನ್ನು ರಚಿಸಿಕೊಂಡು ಸಂಶೋಧನೆ ನಡೆಸಿ, ಔಷಧ ಕಂಡು ಹಿಡಿಯುವತ್ತ ಮೊದಲ ಪ್ರಯತ್ನ ಆಗಬೇಕು. ಆರ್ಥಿಕವಾಗಿ ದುಸ್ಥಿತಿಗೆ ಹೋಗಿರುವ ಅಡಿಕೆ ಕೃಷಿಕರಿಗೆ ಸರಕಾರ ವಿಶೇ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕವಾಗಿ ಅವರನ್ನು ಮೇಲೆತ್ತುವ ಕೆಲಸ ಆಗಬೇಕು. ಅಡಿಕೆ ಹಾನಿಕಾರವೆಂದು ಕೇಂದ್ರದ ಆರೋಗ್ಯ ಇಲಾಖೆಯಲ್ಲಿ ತಪ್ಪು ಮಾಹಿತಿ ಇದೆ.

ಪಾಂಪರಿಕವಾಗಿ ಬಳಸಿಕೊಂಡು ಬರುತ್ತಿರುವ ಅಡಿಕೆ ಹಾನಿಕಾರಕವಲ್ಲ ಎಂಬುದರ ಬಗ್ಗೆ ಪುನರ್ ವಿಮರ್ಶೆ ಆಗಿ ಈಗಿರುವ ತಪ್ಪು ಮಾಹಿತಿ ತೆಗೆದು ಹಾಕಬೇಕು ಬೇಡಿಕೆ ಇಡಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಅಂಗಾರರು ನಮಗೆ ಭರವಸೆ ನೀಡಿದ್ದರು. ಅದರಂತೆ ಅವರು ಬೆಂಗಳೂರಿನಲ್ಲಿ ತೋಟಗಾರಿಕ ಸಚಿವರಿದ್ದು, ಅಧಿಕಾರಿಗಳಿದ್ದು ಸಭೆ ನಡೆಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳ ವರದಿ ನೀಡಿ, ಇದೀಗ ಬಜೆಟ್ ನಲ್ಲಿ 25 ಕೋಟಿ ರೂ ಇಡುವಂತೆ ಮಾಡಿದ್ದಾರೆ.

 

ಪ್ರಥಮ ಬಾರಿಗೆ ಬಜೆಟ್‌ನಲ್ಲಿ ಅಡಿಕೆ ಎಲೆ ಹಳದಿ ರೋಗಕ್ಕೆ ಸರಕಾರ ಅನುದಾನ ಇರಿಸಿದ್ದು ಮುಳುಗುತ್ತಿರುವ ಅಡಿಕೆ ಬೆಳೆಗಾರರನ್ನು ಮೇಲೆತ್ತುವ ಪ್ರಯತ್ನ ಆಗಿದೆ. ಇದಕ್ಕಾಗಿ ಸರಕಾರ, ಸಚಿವರು, ಕರಾವಳಿ, ಮಲೆನಾಡು ಭಾಗದ ಶಾಸಕರು, ಕ್ಯಾಂಪ್ಕೋ ಸಂಸ್ಥೆ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಈಗ ಬಜೆಟ್‌ನಲ್ಲಿ ಅನುದಾನ ಘೋಷಣೆ ಆಗಿದೆ ಎಂದರೆ ಆಯಿತು ಎಂದಲ್ಲ. ಇದನ್ನು ಫಾಲೋ ಅಪ್ ಮಾಡುವ ಕೆಲಸ ಆಗಬೇಕು. ಜತೆಗೆ ಈ ರೋಗದ ಭೀಕರತೆಯ ಕುರಿತು ಗ್ರಾಮ ಸಭೆಗಳಲ್ಲಿ ಚಿಂತನೆಗಳು ಆಗಬೇಕು. ಆ ನಿರ್ಣಯಗಳು ಸರಕಾರಕ್ಕೆ ಸಲ್ಲಿಕೆಯಾಗಬೇಕು ಎಂದು ಹೇಳಿದ ಅವರು, ಈ ಹಿಂದೆ ಒಮ್ಮೆ ಅಡಿಕೆ ಎಲೆ ಹಳದಿ ರೋಗದ ಪ್ರದೇಶ ಸರ್ವೆ ನಡೆದಿದೆ.

ಕೆಲವು ಕಡೆ ಆಗಿಲ್ಲ ಎಂಬ ಮಾಹಿತಿ ಇದೆ. ಅದಕ್ಕಾಗಿ ರೈತರೇ ತಮ್ಮ ಕೃಷಿ ತೋಟ ನಾಶದ ಬಗ್ಗೆ ಸ್ವಯಂ ಮಾಹಿತಿ ನಿಡಬೇಕು. ಅದಕ್ಕಾಗಿ ಒಂದು ಅರ್ಜಿ ತಯಾರಿಸಲಾಗಿದ್ದು ಸುಳ್ಯ ಸಿಎ ಬ್ಯಾಂಕ್ ಅರಂತೋಡು ಗ್ರಾ.ಪಂ. ಮತ್ತು ಗುತ್ತಿಗಾರಿನಲ್ಲಿ ಈ ಅರ್ಜಿಗಳು ದೊರೆಯುತ್ತದೆ ಎಂದು ಅವರು ವಿವರ ನೀಡಿದರು.
ಈಗ ತಾಲೂಕಿನ ಒಂದು ಭಾಗದಲ್ಲಿ ಅಡಿಕೆ ತೋಟ ನಾಶವಾಗುತ್ತಿದೆ. ಅದು ಇತರೆಡೆಗೂ ಹಬ್ಬಬಾರದೆನ್ನುವುದು ನಮ್ಮ ಕೇಳಿಕೆ. ಆ ನಿಟ್ಟಿನಲ್ಲಿ ಸಂಶೋಧನೆಯಾಗಿ ಔಷಧ ಕಂಡು ಹಿಡಿಯಬೇಕು. ಕಾಲ ಮಿತಿಯೊಳಗೆ ಸಂಶೋಧನೆ ನಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ಭಟ್ ಬೆಳ್ಳಾರೆ, ಉದಯಶಂಕರ್ ‌ಸುದರ್ಶನ ಪಾತಿಕಲ್ಲು, ಅನೂಪ್ ಬಿಳಿಮಲೆ, ಮಹೇಶ್ ಮೂಲೆಮಜಲು, ಮನುದೇವ್ ಪರಮಲೆ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.