ಸುಳ್ಯ ಶಾಂತಿನಗರದ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಆರಂಭಗೊಂಡಿದೆ. ಇಂದು ಬೆಳಿಗ್ಗೆ ಗಣಪತಿ ಹವನದ ಬಳಿಕ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಭಜನಾ ಕಾರ್ಯಕ್ರಮ ಆರಂಭವಾಯಿತು. ಸಂಜೆವರೆಗೆ ಭಜನೆ ಮುಂದುವರಿಯಲಿದ್ದು, ಸಂಜೆ 5 ಗಂಟೆಗೆ ಪೈಂಗುತ್ತಿ ನಡೆಯುವುದು.
ಶ್ರೀ ಮುತ್ತಪ್ಪ ದೈವದ ಮಲೆಯರ್ಕಲ್ (ಶ್ರೀ ದೈವವನ್ನು ಮಲೆ ಇಳಿಸುವುದು) ನಡೆಯುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕೈಲಾಶ್ ಶೆಣೈ ಬಳಗದವರಿಂದ ರಾಗ ಸಂಧ್ಯಾ ನಡೆಯುವುದು. ರಾತ್ರಿ 7.3೦ ಕ್ಕೆ ಶ್ರೀ ಮುತ್ತಪ್ಪ ದೈವದ ನೇಮ (ಬೆಳ್ಳಾಟಂ) ನಡೆಯಲಿದ್ದು, ರಾತ್ರಿ ೯ಕ್ಕೆ ಅನ್ನಸಂತರ್ಪಣೆ ಆರಂಭವಾಗುವುದು. ರಾತ್ರಿ 1೦ ರಿಂದ ಕಳಿಕಪಾಟ್, ಕಳಸ ಶೃಂಗಾರ , ರುಮಾಲು ಕಟ್ಟುವುದು ನಡೆಯಲಿದೆ. ನಾಳೆ ಬೆಳಿಗ್ಗೆ ಗಂಟೆ 7ಕ್ಕೆ ಶ್ರೀ ಮುತ್ತಪ್ಪ ತಿರುವಪ್ಪ ದೈವಗಳ ನೇಮ ಆರಂಭವಾಗುವುದು. ಮಧ್ಯಾಹ್ನ ಗಂಟೆ 12.30 ೦ ರಿಂದ ಮಲೆ ಕೇಟಲ್ (ಮಲೆ ಹತ್ತಿಸುವುದು) ಆಗುತ್ತದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು. ಭಕ್ತಾದಿಗಳು ಪೈಂಗುತ್ತಿ ಸೇವೆ, ಬೆಳ್ಳಾಟಂ ಸೇವೆ ಮತ್ತು ಸರ್ವಸೇವೆ ಮಾಡಬಹುದಾಗಿದೆ.