ಲಯನ್ಸ್ ಜಿಲ್ಲಾ ಗವರ್ನರ್ ಲ.ಗೀತಪ್ರಕಾಶ್ ಅವರು ಮಾ.13ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಗೆ ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಲ. ಅಡ್ಡಂತಡ್ಕ ದೇರಣ್ಣ ಗೌಡರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಲ. ಗಾಯತ್ರಿ ಗೀತಪ್ರಕಾಶ್, ಲಯನ್ಸ್ ಜಿಲ್ಲಾ ಪಬ್ಲಿಕ್ ರಿಲೇಶನ್ ಆಫೀಸರ್ ಲ.ಮಂಗೇಶ್ ಭಟ್, ಸುಳ್ಯ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ರಾಮಚಂದ್ರ ಪೆಲ್ತಡ್ಕ, ಲಯನ್ಸ್ ಮಾಜಿ ರಾಜ್ಯಪಾಲ ಲ. ಎಂ.ಬಿ.ಸದಾಶಿವ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ವೀರಪ್ಪ ಗೌಡ, ಖಜಾಂಜಿ ಲ. ಸಂಜೀವ ಗೌಡ ಕತ್ಲಡ್ಕ, ಸೇರಿದಂತೆ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಯಸ್ವಿನಿ ಪ್ರೌಢಶಾಲೆಯ ಅಭಿವೃದ್ಧಿಗಾಗಿ
ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ರೂ. 25 ಸಾವಿರ, ಲಯನ್ಸ್ ಕ್ಲಬ್ ವತಿಯಿಂದ ರೂ. 10 ಸಾವಿರ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಖಜಾಂಜಿ ಶ್ರೀನಿವಾಸ ಭಟ್ ಅವರಿಂದ ರೂ.5 ಸಾವಿರ, ಶಾಲಾ ಸಂಚಾಲಕ ಜಾಕೆ ಸದಾನಂದ ಅವರಿಂದ ರೂ.5 ಸಾವಿರ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ನಿರ್ದೇಶಕ ರಾಮಚಂದ್ರ ಗೌಡ ಬುಡ್ಲೆಗುತ್ತು ಅವರಿಂದ ರೂ.5 ಸಾವಿರ ಮೊತ್ತವನ್ನು ಶಾಲಾ ಆಡಳಿತ ಮಂಡಳಿಗೆ ನೀಡಿದರು.