ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ.ಯವರಿಂದ ಧನಸಹಾಯ, ದತ್ತಿ ನಿಧಿ ಸ್ಥಾಪನೆ
ಮುರುಳ್ಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಲೆಕ್ಕಾಡಿ ಮಾರ್ಚ್ 13 ರಂದು ಎಸ್ ಡಿ ಎಂಸಿ ಸಭೆಯು ಅಧ್ಯಕ್ಷೆ ಶ್ರೀಮತಿ ಮಧು ಪಿ. ಆರ್. ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಿವೃತ್ತರಾಗುವ ಸಂದರ್ಭದಲ್ಲಿ ಶಾಲೆಗೆ ಕುರ್ಚಿ ಮತ್ತು ಮೇಜು ನೀಡಿದ ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ. ಯವರು ಸಭೆಯಲ್ಲಿ ಏಳನೇ ತರಗತಿಯಲ್ಲಿ ಇಂಗ್ಲಿಷ್ ನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿ 5೦೦೦ ದತ್ತಿನಿಧಿ ಸ್ಥಾಪಿಸಿದ್ದರೂ ಶಾಲಾಭಿವೃದ್ಧಿ ನಿಧಿಗೆ 5೦೦೦ ರೂ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷ ಸುಧಾಕರ ಕರಿಂಬಿಲ, ಸದಸ್ಯರುಗಳು, ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.