ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಪುತ್ತೂರು ಇದರ ಆಶ್ರಯದಲ್ಲಿ ಗ್ರಾಮೀಣ ಆರ್ಥಿಕತೆಯಲ್ಲಿ ಗ್ರಾಮಜನ್ಯದ ಪಾತ್ರ ಮತ್ತು ಜೇನುಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಾ.14ರಂದು ಪೂ. 9.30ರಿಂದ ಮಧ್ಯಾಹ್ನ 12.00 ಗಂಟೆಯ ತನಕ ಬಾಳಿಲ ಗ್ರಾಮದ ದೋಳ್ತೋಡಿ ಶ್ರೀನಾಥ್ ರೈಯವರ ತೋಟದಲ್ಲಿ ನಡೆಯಲಿದೆ. ಜೇನು ಕೃಷಿಯ ಸಮಗ್ರ ಚಿತ್ರಣ ಮತ್ತು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಸಹಭಾಗಿತ್ವದಲ್ಲಿ ಗ್ರಾಮೀಣ ಯುವಕರು ಸಮಗ್ರ ಕೃಷಿಯ ವಿವಿಧ ಆಯಾಮಗಳಲ್ಲಿ ಸ್ವಾವಲಂಬಿಯಾಗಿ ಉದ್ಯೋಗ ನಡೆಸುವ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.