ಗೌಡ ಸಾರಸ್ವತ ಬ್ರಾಹ್ಮಣರ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 15ನೇ ವರ್ಷದ ಚಂಡಿಕಾ ಹೋಮ ಇಂದು ನಡೆಯುತ್ತಿದ್ದು, ಬೆಳಿಗ್ಗೆ ದೇವತಾ ಪ್ರಾರ್ಥನೆ, ಕಲಶ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ 12.00 ಗಂಟೆಗೆ ಉಭಯ ದೇವರಿಗೆ ಪೂಜೆ, ಬಳಿಕ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆದು ಭೂರಿ ಸಮಾರಾಧನೆ ನಡೆಯಲಿದೆ. ರಾತ್ರಿ 8.00 ಗಂಟೆಗೆ ಶ್ರೀ ವೆಂಕಟರಮಣ ದೇವರ ಪಲ್ಲಕ್ಕಿ ಉತ್ಸವ, ಬಳಿಕ ವಸಂತ ಪೂಜೆ, ರಾತ್ರಿ 10.00 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 10.00ರಿಂದ ಅಂಕುಶ್ ಎನ್. ನಾಯಕ್ ಮಂಗಳೂರು ಇವರಿಂದ ಸಿತಾರ್ ವಾದನ ಮತ್ತು ಪಂಡಿತ್ ಎಂ. ವೆಂಕಟೇಶ್ ಕುಮಾರ್ ಧಾರವಾಡ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ದೇವತಾ ಪ್ರಾರ್ಥನೆ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ, ಮೊಕ್ತೇಸರರಾದ ಎಂ. ಲಕ್ಷ್ಮೀನಾರಾಯಣ ಶ್ಯಾನುಭಾಗ, ಬಿ. ಸುರೇಶ್ ಶೆಣೈ, ಬಿ. ಕೃಷ್ಣ ಪೈ, ಬಿ. ಅಶೋಕ್ ಪೈ, ಬಿ. ಮಿಥುನ್ ಶೆಣೈ, ಬಿ. ಸುದರ್ಶನ ಮಲ್ಯ, ಗೌಡ ಸಾರಸ್ವತ ಯುವಕ ವೃಂದದ ಅಧ್ಯಕ್ಷ ಎಂ. ರಾಜೇಶ್ ಶ್ಯಾನುಭಾಗ ಮತ್ತು ಭಕ್ತ ವೃಂದದವರು ಉಪಸ್ಥಿತರಿದ್ದರು.