ಸುಳ್ಯ ಇದೀಗ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಳೆದ ತಿಂಗಳಷ್ಟೇ ಸುಳ್ಯದಲ್ಲಿ ಕನ್ನಡ ಚಲನಚಿತ್ರ ಚಿತ್ರೀಕರಣಗೊಂಡಿತ್ತು. ಇದೀಗ ಮತ್ತೆ ಸುಳ್ಯದ ಪರಿಸರದಲ್ಲಿ ತೆಲುಗು ಚಲನಚಿತ್ರ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಕ್ಕೆ ಸುಳ್ಯ ಫ್ಯೂಶನ್ ಡ್ಯಾನ್ಸ್ ನ ವಸಂತ್ ಕಾಯರ್ತೋಡಿಯವರು ನೃತ್ಯ ನಿರ್ದೇಶನ ಮಾಡಿದ್ದಾರೆ.
ಆಲೆಟ್ಟಿ ನಾಗಪಟ್ಟಣ ಸದಾಶಿವ ದೇವಸ್ಥಾನದಲ್ಲಿ ಚಿತೀರಣದ ಮುಹೂರ್ತ ನಡೆಯಿತು. ಕ್ಯೂನಿಕಲ್ ಕ್ರಿಯೇಷನ್ಸ್ಅ ವರ ಅರ್ಪಿಸುವ, ರೆಡ್ಡಿ ಕೃಷ್ಣ ನಿರ್ದೇಶನದ ಆರ್ಥಿಕ ಸಹಾಯಂ ಕಾವಲೆನು ಎಂಬ ತೆಲುಗು ಚಿತ್ರಕ್ಕೆ ನಿರ್ಮಾಪರಕರಾಗಿ ಅಭಿಷೇಕ್ ಬಿಡವಲ್ಲಿ ಛಾಯಾಗ್ರಹಕರಾಗಿ ಪಾಢ ಬೋರ್ಗೊಯನ್, ಸಂಗೀತ ನಿರ್ದೇಶಕರಾಗಿ ಅಭಿಷೇಕ್ ರುಫ್ಸ್, ನಾಯಕನಾಗಿ ಕಿರಿಕ್ ಪಾರ್ಟಿ ಖ್ಯಾತಿಯ ಸಮೀರ್ ಮಲ್ಲ, ನಾಯಕಿಯಾಗಿ ತೃಪ್ತಿ ಸಾಹು, ನೃತ್ಯ ನಿರ್ದೇಶಕರಾಗಿ ವಸಂತ್ ಕಾಯರ್ತೋಡಿ ಮತ್ತು ಚರಣ್ ರಾಜ್ ಮೂರ್ನಾಡು ಮತ್ತು ವಿಶೇಷ ಪಾತ್ರದಲ್ಲಿ ಫ್ಯುಶನ್ ಇನ್ಸಿಟ್ಯೂಟ್ ಆಫ್ ಡಾನ್ಸ್ ಸುಳ್ಯನ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಸೋಣಂಗರಿ, ನಾಗಪಟ್ಟಣ ಮೊದಲಾದ ಕಡೆ ಚಿತ್ರೀಕರಣ ನಡೆಯುತ್ತಿದೆ.