ಮಡಿಕೇರಿ ತಾ.ಮದೆ ಗ್ರಾಮದ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 22ರಿಂದ 25 ವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನಿನ್ನೆ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಕುಂಞಿರಾಮ ಬಿ., ಸದಸ್ಯರಾದ ಶ್ರೀಮತಿ ಪಾರ್ವತಿ, ಶ್ರೀಮತಿ ಶೋಭಾ ಪಿ. ಎಸ್., ಶ್ರೀಮತಿ ನಳಿನಿ ಕೆ.ಜಿ., ಶ್ರೀಮತಿ ಗಿರಿಜಾ ಕೆ. ಸಿ., ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಬಿ.ಆರ್., ಉಪಾಧ್ಯಕ್ಷರಾದ ಶಿವರಾವ್ ಎಮ್.ಎಸ್., ಕುಮಾರ್ ಚಿದ್ಕಾರ್, ಕೋಶಾಧಿಕಾರಿ ಲೋಕಯ್ಯ ನಡುಬೆಟ್ಟು, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕೆ. ಎಂ. ಪಾರ್ವತಿ, ಕಾರ್ಯದರ್ಶಿ ಶ್ರೀಮತಿ ಶೋಭಾ ಹೆಚ್. ಎಸ್., ಶ್ರೀಮತಿ ರಮಾದೇವಿ ಕಳಗಿ ಸಂಪಾಜೆ, ಶ್ರೀಮತಿ ಕುಸುಮಾವತಿ ಕನ್ಯಾನ, ಆಹಾರ ಮತ್ತು ನೀರಾವರಿ ಸಮಿತಿ ಅಧ್ಯಕ್ಷ ಜಯಕೃಷ್ಣ ರೈ, ಕಾರ್ಯದರ್ಶಿ ಕಾಯರ್ ಮಾರ್ ಸುರೇಶ ಮದೆ ಉಪಸ್ಥಿತರಿದ್ದರು.