Breaking News

ಕನಕಮಜಲು: ಹಾಜಿ ಬೀರಾಮೊಯ್ದಿನ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಹಿರಿಯ ಕಾಂಗ್ರೆಸ್ ಮುಖಂಡ, ಸಾಮಾಜಿಕ, ರಾಜಕೀಯ ಧುರೀಣ, ಕನಕಮಜಲು ಗ್ರಾಮ ಪಂಚಾಯತಿ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಹಾಜಿ ಬೀರಾಮೊಯ್ದಿನ್ ಅವರು ಮಾ.10ರಂದು ದೈವಾಧೀನರಾಗಿದ್ದು, ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಶ್ರೀ ನ.ರಾ.ಗೌ.ಮಾ.ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಭಾಭವನದಲ್ಲಿ ಮಾ.14ರಂದು ಬೆಳಿಗ್ಗೆ ನಡೆಯಿತು.
ಕನಕಮಜಲು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಸೀತಾರಾಮ ಗೌಡ ಬುಡ್ಲೆಗುತ್ತು, ಪದ್ಮನಾಭ ಭಟ್ ಕನಕಮಜಲು, ಕೇಶವಾನಂದ ನರಿಯೂರು, ಚೆನ್ನಕೇಶವ ಜಾಲ್ಸೂರು, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಕನಕಮಜಲು ಗ್ರಾ.ಪಂ. ಸದಸ್ಯರುಗಳಾದ ರವಿಚಂದ್ರ ಕಾಪಿಲ, ಶ್ರೀಮತಿ ಸುಮಿತ್ರ ಕುತ್ಯಾಳ, ಜಾಲ್ಸೂರು ಗ್ರಾ.ಪಂ. ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಎ.ಎಲ್. ಕನಕಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುತ್ಯಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದ್ಮನಾಭ ಭಟ್ ಕನಕಮಜಲು, ನಿವೃತ್ತ ಶಿಕ್ಷಕ ಸೀತಾರಾಮ ಗೌಡ ಬುಡ್ಲೆಗುತ್ತು, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಚೆನ್ನಕೇಶವ ಜಾಲ್ಸೂರು, ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀಮತಿ ತಿರುಮಲೇಶ್ವರಿ ಎ.ಎಲ್ ಹಾಗೂ ಅಬ್ದುಲ್ ಮಜೀದ್ ನಡುವಡ್ಕ ಅವರು ಆಕಸ್ಮಿಕವಾಗಿ ಅಗಲಿದ ಹಾಜಿ ಬೀರಾಮೊಯ್ದಿನ್ ಅವರಿಗೆ ನುಡಿನಮನ ಸಲ್ಲಿಸಿದರು. ವಿಜಯಕುಮಾರ್ ನರಿಯೂರು ಮತ್ತು ಹೇಮಚಂದ್ರ ಕುತ್ಯಾಳ ಅವರು ಕಾರ್ಯಕ್ರಮ ಸಂಘಟಿಸಿದರು. ಅಬ್ದುಲ್ ಹಮೀದ್ ಸ್ವಾಗತಿಸಿ, ತೇಜಪ್ರಕಾಶ್ ಬುಡ್ಲೆಗುತ್ತು ವಂದಿಸಿದರು. ದಿ. ಹಾಜಿ ಬೀರಾಮೊಯ್ದಿನ್ ಅವರ ಪುತ್ರ ಮಹಮ್ಮದ್ ಫವಾಜ್, ಸಹೋದರ ಕನಕಮಜಲು ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಕನಕಮಜಲು ಸೇರಿದಂತೆ ಕನಕಮಜಲು ಗ್ರಾಮಸ್ಥರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.