ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ವತಿಯಿಂದ ಎಣ್ಮೂರು, ಮುರುಳ್ಯ, ಎಡಮಂಗಲ, ಬಾಳಿಲ, ಕಲ್ಮಡ್ಕ, ಮುಪ್ಪೇರ್ಯ, ಕೊಡಿಯಾಲ , ದೋಳ್ಪಾಡಿ ಗ್ರಾಮಗಳ ಸಮ್ಮಿಲನ ಸಮಿತಿಗಳ ಸಹಯೋಗದಲ್ಲಿ ಸಂತರ ನಡಿಗೆ ಉಪೇಕ್ಷಿತ ಬಂಧುಗಳ ಕಡೆಗೆ ಕಾರ್ಯಕ್ರಮ ಮಾ.10ರಂದು ನಡೆಯಿತು.
ಎಡಮಂಗಲದ ಮರ್ಧೂರಡ್ಕ ಕಾಲೋನಿ, ಕಲ್ಪಡ ಕಾಲೋನಿಯಲ್ಲಿ ಕಾರ್ಯಕ್ರಮ ಪ್ರಾರಂಭಗೊಂಡು ಮದ್ಕೂರು ಜೀರ್ಣೋದ್ಧಾರಗೊಳ್ಳುತ್ತಿರುವ ಅಮ್ಮನವರ ಗುಡಿಯ ವಠಾರದಲ್ಲಿ ಸಮಾರೋಪ ನಡೆಯಿತು.ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಅಧ್ಯಕ್ಷತೆಯಲ್ಲಿ ಸಭೆ ಕಾರ್ಯಕ್ರಮ ನಡೆಯಿತು. ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವರಕಾನ ದೇವಳದ ಟ್ರಸ್ಟ್ ಅಧ್ಯಕ್ಷ ಪಿ.ರಾಮಚಂದ್ರ ಭಟ್ ದೇವಸ್ಯ, ಒಡಿಯೂರು ಷಷ್ಟ್ಯಬ್ದ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ, ಕೊಡಿಯಾಲ ಗ್ರಾ.ಪಂ. ಅಧ್ಯಕ್ಷ ಪ್ರದೀಪ್ ರೈ ಅಜರಂಗಳ, ಮುರುಳ್ಯ ಗ್ರಾ.ಪಂ. ಉಪಾಧ್ಯಕ್ಷೆ ವನಿತಾ ಸುವರ್ಣ ಬಾಮಲೆ, ಸಮಿತಿ ಗೌರವಾಧ್ಯಕ್ಷ ಮಹಾಬಲ ರೈ ಕೊಡ್ಡೋಳ್, ಕಾರ್ಯಾಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಕಾರ್ಯದರ್ಶಿ ಸುನೀಲ್ ರೈ ಬಳ್ಕಾಡಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಮುರುಳ್ಯ ವೇದಿಕೆಯಲ್ಲಿದ್ದರು.
ಒಡಿಯೂರು ಸಮಿತಿ ಸಂತೋಷ್ ಸುಳ್ಯ ಯೋಗ ಮಾಡುವುದರ ಮೂಲಕ ಮಾಹಿತಿ ಕಾರ್ಯಕ್ರಮ ನಡೆಸಿಕೊಟ್ಟರು. ಎಣ್ಮೂರು ಶ್ರೀ ಭಾರತಿ ಭಜನಾ ಮಂದಿರ ವತಿಯಿಂದ ಕುಣಿತ ಭಜನೆ ಆಯೋಜಿಸಲಾಗಿತ್ತು. ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿ, ವಸಂತ ನಡುಬೈಲು ಪ್ರಸ್ತಾವನೆಗೈದು, ಸ್ವಾಗತಿಸಿದರು. ಭಾಗೀರಥಿ ಮುರುಳ್ಯ ವಂದಿಸಿದರು