ಸಚಿವ ಎಸ್.ಅಂಗಾರರಿಗೆ ಅಭಿನಂದನೆ – ದಾನಿಗಳ ನಾಮಫಲಕ ಅನಾವರಣ
ಸುಳ್ಯದ ಗೌಡರ ಯುವ ಸೇವಾ ಸಂಘ, ಬೆಳ್ಳಿ ಹಬ್ಬ ಆಚರಣಾ ಸಮಿತಿ, ಗೌಡ ಮಹಿಳಾ ಘಟಕ – ಗೌಡ ತರುಣ ಘಟಕ ಇದರ ಆಶ್ರಯದಲ್ಲಿ ವಾರ್ಷಿಕ ಸಮ್ಮಿಲನ – ಸತ್ಯನಾರಾಯಣ ದೇವರ ಪೂಜೆ, ಅಭಿನಂದನಾ ಕಾರ್ಯಕ್ರಮ ಹಾಗೂ ದಾನಿಗಳ ಭಾವಚಿತ್ರ ಅನಾವರಣ ಕಾರ್ಯಕ್ರಮ ಮಾ.14 ರಂದು ಸುಳ್ಯದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು.
ಸುಳ್ಯ ಶಾಸಕರಾಗಿ ಪ್ರಸ್ತುತ ಮೀನುಗಾರಿಕಾ, ಬಂದರು ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಅಂಗಾರ ರನ್ನು ಅಭಿನಂದಿಸಲಾಯಿತು. ದಾನಿಗಳ ಭಾವಚಿತ್ರ ಅನಾವರಣವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷ ರಾಗಿ ಆಯ್ಕೆಯಾದ ವರನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರೇಣುಕಾಪ್ರಸಾದ್ ಕೆ.ವಿ. ಅಭಿನಂದಿಸಿದರು.
ದ.ಕ. ಗೌಡ ಒಕ್ಕಲಿಗ ಗೌಡ ಜಿಲ್ಲಾ ಸಂಘದ ನಿಯೋಜಿತ ಅಧ್ಯಕ್ಷ ಬೈಲೆ ಲೋಕಯ್ಯ ಗೌಡರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣೆ ಮಾಡಿದರು. ಸುಳ್ಯ ಗೌಡ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ ಅಶಕ್ತ ರೋಗಿಗೆ ವೈದ್ಯಕೀಯ ನೆರವು ಹಸ್ತಾಂತರ ಮಾಡಿದರು.
ಗೌರವ ಉಪಸ್ಥಿತರಾಗಿ ದ.ಕ. ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಡಾ.ದಾಮೋದರ ನಾರಾಲು, ಬೆಳ್ತಂಗಡಿ ಗೌಡ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ,ಪುತ್ತೂರು ಗೌಡ ಉಪಾಧ್ಯಕ್ಷ ಎ.ವಿ. ನಾರಾಯಣ, ಬಂಟ್ವಾಳ ಗೌಡರ ಸಂಘದ ಅಧ್ಯಕ್ಷ ಮೋಹನ್ ಗೌಡ ಕಾಯರ್ ಮಾರ, ಕಡಬ ವಲಯ ಗೌಡ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಭಾಗವಹಿಸಿದ್ದರು.
ಸುಳ್ಯ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ, ಡಾ.ಎನ್.ಎ.ಜ್ಞಾನೇಶ್, ಎಂ.ಜಿ.ಎಂ. ಶಾಲಾ ಸಂಚಾಲಕ ಪಿ.ಎಸ್.ಗಂಗಾಧರ್, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ತೇಜಪ್ರಸಾದ್ ಅಮೆಚೂರು, ತರುಣ ಘಟಕ ಅಧ್ಯಕ್ಷ ರಜತ್, ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು, ನಗರ ಸಮಿತಿ ಅಧ್ಯಕ್ಷ ಐ.ಬಿ.ಚಂದ್ರಶೇಖರ, ಗೌಡರ ಯುವ ಸೇವಾ ಸಂಘದ ನಿಕಟಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ವೇದಿಕೆಯಲ್ಲಿ ದ್ದರು.
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ಗೌಡ ಕಣ್ಕಲ್ ರವರು ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾವರನ್ನು ವೇದಿಕೆಗೆ ಕರೆದರು.
ಪುರೋಹಿತ ನಾಗರಾಜ್ ಭಟ್ ರ ತಂಡದ ನೇತೃತ್ವದಲ್ಲಿ ಸತ್ಯನಾರಾಯಣ ಪೂಜಾ ಕಾರ್ಯ ನಡೆಯಿತು. ಕೆ.ಸಿ.ಸದಾನಂದ – ಶ್ರೀಮತಿ ಹರಿಣಿ ಸದಾನಂದರು ಪೂಜಾ ಕತೃಗಳಾಗಿ ಭಾಗವಹಿಸಿದ್ದರು.
ಭಾವಚಿತ್ರ ಅನಾವರಣ : ಸಮುದಾಯ ಭವನಕ್ಕೆ ದೇಣಿಗೆ ನೀಡಿದ ಗಣ್ಯರ ಭಾವಚಿತ್ರ ದ ಅನಾವರಣ ನಡೆಯಿತು. ಆದಿಚುಂಚನಗಿರಿ ಶಾಖಾ ಮಠದ ಡಾ.ನಿರ್ಮಲಾನಂದ ಸ್ವಾಮಿಯವರ ಹಾಗೂ ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟರಮಣ ಗೌಡರ ಭಾವಚಿತ್ರ ವನ್ನು ಗಣ್ಯರು ಅನಾವರಣ ಗೊಳಿಸಿದರು.