ಚುನಾವಣಾ ಮಾದರಿಯಲ್ಲಿ ನಿರ್ಣಾಯಕ ಗೆಲುವು ಸಾಧಿಸೋಣ: ಕಿಶೋರ್ ಶಿರಾಡಿ
ಮಲೆನಾಡು ಜನಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಅಡಿಕೆ ಹಳದಿ ರೋಗ ಹೋರಾಟ ಸಮಿತಿ ಸಭೆ ಮಾ. 13 ರಂದು ಕಲ್ಲುಗುಂಡಿ ಸಹಕಾರಿ ಸಭಾಭವನದಲ್ಲಿ ಜರಗಿತು.
ಅಡಿಕೆ ಹಳದಿ ರೋಗ ಬಾದಿತ ಸಂತ್ರಸ್ತ ಕೃಷಿಕರನ್ನುದ್ದೇಶಿಸಿ ಮಾತನಾಡಿದ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ‘ಸತತ 4೦ವರ್ಷಗಳಿಂದ ಹೋರಾಟ ನಡೆಸುತಿದ್ದರು ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಗೆ ಭಯವಿಲ್ಲವೆಂದಾದರೆ ನಾವು ಪಕ್ಷಗಳ ತತ್ವ-ಸಿದ್ದಾಂತಗಳ ಭ್ರಮೆಯಲ್ಲಿ ನಾವು ಮುಳುಗಿ ದ್ದೇವೆ ಎಂಬುದೇ ಕಾರಣ. ಜನಸಾಮಾನ್ಯರು ಕೂಡ ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮನ್ನಾಳುವ ಪ್ರತಿನಿಧಿಗಳ ಮತ್ತು ಅಧಿಕಾರಿವರ್ಗವನ್ನ ಸಂಪರ್ಕ ದಲ್ಲಿಟ್ಡುಕೊಳ್ಳುವ ಶಕ್ತಿಯಿದ್ದರೂ ನಮ್ಮ ಹಕ್ಕು ಬೇಡಿಕೆಗಳನ್ನ ಈಡೇರಿಸಿಕೊಳ್ಳಲು ನಾವ್ಯಾಕೆ ಸಫಲರಾಗುತಿಲ್ಲ ಎಂಬುದನ್ನ ಅರಿತುಕೊಳ್ಳಬೇಕು. ನಮ್ಮಧ್ವನಿ ಮತ್ತು ಪ್ರಜಾಪ್ರಭುತ್ವ ದ ಹಕ್ಕು, ಕರ್ತವ್ಯಗಳನ್ನ ಚೆನ್ನಾಗಿ ಅರಿತು ಪ್ರಶ್ನಿಸುವ ಧ್ವನಿ ಪ್ರಬಲವಾಗಬೇಕು.ನಮ್ಮ ಹೋರಾಟ ಯಾವುದೇ ಪಕ್ಷಗಳ ಮತ್ತು ನಾಯಕರ ವಿರುದ್ಧವಲ್ಲ ಬದಲಾಗಿ ನಮ್ಮ ಗಂಭೀರ ಸಮಸ್ಯೆಯ ವಿರುದ್ಧ. ಯಾವುದೇ ಒತ್ತಡ ಎದುರಾದರು ಚುನಾವಣೆಯ ತಂತ್ರಗಾರಿಕೆ ಮಾದರಿಯಲ್ಲಿ ಪ್ರತೀ ಮನೆಮನಗಳನ್ನ ಎಚ್ಚರಿಸುವ ಮೂಲಕ ಅಂತಿಮ ಹೋರಾಟ ನಡೆಸಿ ನಿರ್ಣಾಯಕವಾದ ಗೆಲುವು ಸಾಧಿಸೋಣ. ವೇದಿಕೆ ಅನೇಕ ಪ್ರಜಾಪ್ರಭುತ್ವ ಮಾದರಿ ಹೋರಾಟ ಮೂಲಕಗೆಲುವು ಸಾಧಿಸಿದಂತೆ ಅಡಿಕೆ ಹಳದಿ ರೋಗ ಸಮಸ್ಯೆ ವಿರುದ್ಧವು ಹೋರಾಟದ ಯಶಸ್ಸು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಪಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪಶ್ಚಿಮ ಘಟ್ಟ, ಕಸ್ತೂರಿ ರಂಗನ್ ಸಹಿತ ಯಶಸ್ವಿ ಹೋರಾಟ ನಡೆಸಿದಂತೆ ಅಡಿಕೆ ಹಳದಿ ರೋಗ ವಿರುದ್ಧದ ನಡೆಸುಬ ಹೋರಾಟ ಹೊಸ ಭರವಸೆ ಮೂಡಿಸಿದೆ. ಬಾದಿತ ಗ್ರಾಮಸ್ಥರು ವೇದಿಕೆ ನೇತೃತ್ವದ ಹೋರಾಟದಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತ ಪಡಿಸುವಂತೆ ಮನವಿ ಮಾಡಿದರು.
ಅರಂತೋಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅಡಿಕೆ ಹಳದಿ ರೋಗದಿಂದಾಗಿ ಜನತೆ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ.ಅದಕ್ಕಾಗಿ ಪಕ್ಷಾತೀತ ಹೋರಾಟ ಕೈಗೊಳ್ಳುವ ಂತೆ ಮನವಿ ಮಾಡಿದರು.
ಅಡಿಕೆ ಹಳದಿ ರೋಗ ಬಗ್ಗೆ ವಿಷಯ ಮಂಡಿಸಿದ ಮಾಜಿ ಗ್ರಾ.ಪಂ.ಅಧ್ಯಕ್ಷ ಹಾಗು ಹೋರಾಟಗಾರರಾದ ಜಗದೀಶ್ ಕುಯಿಂತೋಡು, ಅನೇಕ ವರ್ಷಗಳಿಂದ ಹೋರಾಟ ಮೂಲಕ ಸರಕಾರದ ಗಮನ ಸೆಳೆಯುತಿದ್ದರು ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಾಧ್ಯವಾಗಿಲ್ಲ.
ಈ ಬಾರಿ ಕೊನೆಯದಾಗಿ ಬಲಿಷ್ಟ ಎದಿರೇಟು ನೀಡಬೇಕು.ಅದಕ್ಕಾಗಿ ಪ್ರತಿಯೊಬ್ಬ ಬಾದಿತ ಗ್ರಾಮಸ್ಥರು ಯಶಸ್ವಿ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ ಎಂದರು.
ವೇದಿಕೆ ಹೋರಾಟ ಪ್ರಮುಖರಾದ ವರದರಾಜ್ ಸಂಕೇಶ್ ಸ್ವಾಗತಿಸಿದರು. ಬನ್ನೂರು ಪಟ್ಟೆ ಪ್ರದೀಪ್ ಕುಮಾರ್ ಕರಿಕೆ ನಿರೂಪಿಸಿ, ವಂದಿಸಿದರು. ವೇದಿಕೆಯಲ್ಲಿ ಸಮಿತಿ ಹೋರಾಟ ಪ್ರಮುಖರಾದ ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು. ಮಲೆನಾಡು ವೇದಿಕೆಯ ಪ್ರಮುಖರಾದ ಭಾನುಪ್ರಕಾಶ್ ಪೆರುಮುಂಡ, ಜಯರಾಮ ಕಟ್ಟೆಮನೆ, ಭರತ್ ಕನ್ನಡ್ಕ ಉಪಸ್ಥಿತರಿದ್ದರು.
ಅರಂತೋಡು, ದ.ಕ. ಮತ್ತು ಕೊಡಗು ಸಂಪಾಜೆಯ ವಿವಿಧ ಪಕ್ಷ ಮತ್ತು ಸಂಘಟನೆಗಳ ಪ್ರಮುಖರು ಹೋರಾಟಗಾರರು ಉಪಸ್ಥಿತರಿದ್ದರು.