ಬಾಳಿಲದಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯಿಂದ ಜೇನುಕೃಷಿ ಪ್ರಾತ್ಯಕ್ಷಿಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಜೇನು ಕೃಷಿಯ ಸಮಗ್ರ ಚಿತ್ರಣ ಮತ್ತು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಸಹಭಾಗಿತ್ವದಲ್ಲಿ ಗ್ರಾಮೀಣ ಯುವಕರು ಸಮಗ್ರ ಕೃಷಿಯ ವಿವಿಧ ಆಯಾಮಗಳಲ್ಲಿ ಸ್ವಾವಲಂಬಿಯಾಗಿ ಉದ್ಯೋಗ ನಡೆಸುವ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ವತಿಯಿಂದ
ಗ್ರಾಮೀಣ ಆರ್ಥಿಕತೆಯಲ್ಲಿ ಗ್ರಾಮಜನ್ಯದ ಪಾತ್ರ ಮತ್ತು ಜೇನುಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಮಾ. 14ರಂದು ದೋಳ್ತೋಡಿ ಶ್ರೀನಾಥ್ ರೈ ಅವರ ತೋಟ ಬಾಳಿಲದಲ್ಲಿ ಹಮ್ಮಿಕೊಳ್ಳಲಾಯಿತು. ಮಾಜಿ ಎಂ.ಎಲ್.ಸಿ. ಅಣ್ಣಾ ವಿನಯಚಂದ್ರ ಕಿಲಂಗೋಡಿ ಕಾರ್ಯಕ್ರಮ ಉದ್ಘಾಟಿಸಿ ಕೃಷಿಯಲ್ಲಿ ಜೇನು ಸಾಕಣೆಯ ಮಹತ್ವ ಮತ್ತು ಲಾಭದ ಬಗ್ಗೆ ತಿಳಿಸುತ್ತಾ, ಕೃಷಿಕರಿಗೆ ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ನೇರವಾಗಿ ಗ್ರಾಹಕರಿಗೆ ತಲುಪಿಸಿ ಹೆಚ್ಚಿನ ಲಾಭ ಗಳಿಸಲು ಗ್ರಾಮಜನ್ಯದಂತಹ ರೈತ ಉತ್ಪಾದಕ ಸಂಸ್ಥೆಗಗಳ ಅಗತ್ಯತೆಯ ಬಗ್ಗೆ ತಿಳಿಸಿದರು.
ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾಗಿರುವ ರಾಮಕೃಷ್ಣ ಭಟ್ ಕುರುಂಬುಡೇಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ರೈತ ಉತ್ಪಾದಕ ಸಂಸ್ಥೆಗಳ ಮಹತ್ವವನ್ನು ತಿಳಿಸುತ್ತಾ ಗ್ರಾಮೀಣ ಆರ್ಥಿಕತೆಯಲ್ಲಿ ಗ್ರಾಮಜನ್ಯದ ಪಾತ್ರ, ಸಮಗ್ರ ಕೃಷಿಯಲ್ಲಿ ಗ್ರಾಮೀಣ ಯುವಕರಿಗೆ ಇರುವ ಉದ್ಯೋಗಾವಕಾಶಗಳು ಮತ್ತು ಬೆಳೆಯಾಧಾರಿತ ಆಸಕ್ತ ರೈತರ ಗುಂಪುಗಳ ಮೂಲಕ ಬೆಳೆಗಳ ನಿರ್ವಹಣೆಯ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಹರೀಶ್ ಕೋಡ್ಲ ಭಾಗವಹಿಸಿ ಆಧುನಿಕ ಸ್ಥಳಾಂತರ ಜೇನುಕೃಷಿಯ ಮಾಹಿತಿ ನೀಡಿದರು. ಜೇನುಕೃಷಿಯನ್ನು ಕೃಷಿಯ ಜೊತೆಗೆ ಲಾಭದಾಯಕವಾಗಿ ಉಪ ವೃತ್ತಿಯಾಗಿ ಅಥವಾ ಮುಖ್ಯ ವೃತ್ತಿಯಾಗಿ ಮಾಡುವ ತಂತ್ರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಹಂಚಿಕೊಂಡರು. ನಂತರ ಜೇನುಕೃಷಿ ಪ್ರಾತ್ಯಕ್ಷಿಕೆ ನಡೆಯಿತು.ಶ್ರೀನಾಥ್ ರೈ, ದೋಳ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನ 50ಕ್ಕೂ ಹೆಚ್ಚು ಆಸಕ್ತ ಕೃಷಿಕರು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳ ಜೊತೆ ಜೇನು ಕೃಷಿಯಲ್ಲಿನ ಸವಾಲುಗಳನ್ನು ವಿಮರ್ಶಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.