Breaking News

ರಂಗಮನೆ ಬಹುಭಾಷಾ ನಾಟಕೋತ್ಸವ ಸಮಾರೋಪ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮುಖ್ಯಮಂತ್ರಿ ಚಂದ್ರು ಅವರಿಗೆ ರಂಗಮನೆ ಪ್ರಶಸ್ತಿ ಪ್ರದಾನ

ರಂಗಮನೆಗೆ ಆರ್ಥಿಕ ಭದ್ರತೆ ನೀಡುವ ಕಾರ್ಯ ಸರಕಾರದಿಂದಾಗಲಿ: ಚಂದ್ರು

ಊರು ಗುರುತಿಸುವ ರೀತಿಯಲ್ಲಿ ವ್ಯಕ್ತಿಗಳು ಬೆಳೆಯಬೇಕು : ಅಂಗಾರ

ಸುಳ್ಯದ ಸಾಂಸ್ಕೃತಿಕ ಕಲಾ ಕೇಂದ್ರ ರಂಗಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಬಹುಭಾಷಾ ನಾಟಕೋತ್ಸವ ಇಂದು ಸಮಾರೋಪಗೊಂಡಿತು.

ಇದೇ ಸಂದರ್ಭದಲ್ಲಿ ರಂಗಭೂಮಿ ಮತ್ತು ಚಲನಚಿತ್ರದ ಹಿರಿಯ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಅವರಿಗೆ ೨೦೨೧ ನೇ ಸಾಲಿನ ರಂಗ ಮನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುಖ್ಯ ಮಂತ್ರಿ ಚಂದ್ರು, ವೃತ್ತಿ ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ವೃತ್ತಿ ಧರ್ಮವನ್ನು ಇಟ್ಟುಕೊಂಡು ಬೆಳೆಸುತ್ತಿರುವ ಜೀವನ್ ರಾಂ ರಾಜ್ಯಕ್ಕೇ ಮಾದರಿಯಾದ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕೆಲಸಗಳಿಗೆ ಆರ್ಥಿಕ ಭದ್ರತೆ ನೀಡುವ ಕಾರ್ಯ ಸರಕಾರಗಳಿಂದಾಗಬೇಕು ಎಂದರು.

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಜೀವನ್ ರಾಂ ಮಾಡುತ್ತಿರುವ ಸಾಂಸ್ಕೃತಿಕ ಕ್ರಾಂತಿಗೆ ಎಲ್ಲರ ಪ್ರೋತ್ಸಾಹ ಸಿಗಲಿ ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಮೀನುಗಾರಿಕಾ ಮತ್ತು ಜಲಸಾರಿಗೆ ಸಚಿವ ಎಸ್.ಅಂಗಾರ ವಹಿಸಿದ್ದರು. ಊರು ಗುರುತಿಸುವ ರೀತಿಯಲ್ಲಿ ವ್ಯಕ್ತಿಗಳು ಬೆಳೆಯಬೇಕು. ಕಲಾವಿದರ ಮೂಲಕ ಊರುಗಳು ಬೆಳಗುತ್ತದೆ ಎಂದು ಸಚಿವರು ಹೇಳಿದರು.

ಕವಿ ಸುಬ್ರಾಯ ಚೊಕ್ಕಾಡಿ ಶುಭಾಶಂಸನೆ ಮಾಡಿದರು.

ಬೆಂಗಳೂರಿನ ಪ್ರಸಿದ್ಧ ರಂಗನಿರ್ದೇಶಕ ಡಾ| ಬಿ.ವಿ.ರಾಜಾರಾಂ ಸಮಾರೋಪ ಭಾಷಣ ಮಾಡಿ, ರಾಜ್ಯದ ರಂಗಭೂಮಿ ಜಗತ್ತಿನಲ್ಲಿ‌ಮಹತ್ವದ ಸ್ಥಾನ ಪಡೆದ ರಂಗಾಯಣ, ನೀನಾಸಂ ನಂತೆ ರಂಗಮನೆಯೂ ಸ್ಥಾನ ಪಡೆಯುತ್ತದೆ ಎಂದು ಶ್ಲಾಘಿಸಿದರು.

ರಂಗ ಮನೆಯ ರೂವಾರಿ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಡಾ. ಸುಂದರ್ ಕೇನಾಜೆ ಸನ್ಮಾನ ಪತ್ರ ವಾಚಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಡಾ. ವಿದ್ಯಾ ಶಾರದೆ ವಂದಿಸಿದರು. ಶ್ರೀಮತಿ ಪದ್ಮಾ ಚಂದ್ರು, ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕಲಾಗಂಗೋತ್ರಿ ಬೆಂಗಳೂರು ಅಭಿನಯದ ಮುಖ್ಯಮಂತ್ರಿ ನಾಟಕದ ೭೩೦ ನೇ ಪ್ರದರ್ಶನ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.