ನಿನಾದದಲ್ಲಿ ಮಾಧ್ಯಮ ಕಾರ್ಯಾಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ವಿಜಯಲಕ್ಷ್ಮಿ ಶಿಬರೂರು ತಂಡದಿಂದ ತರಬೇತಿ

 

ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ದ.ಕ.ಜಿಲ್ಲಾ ಘಟಕ ಹಾಗೂ ಸೃಷ್ಠಿ ಮೀಡಿಯಾ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ , ಸುದ್ದಿ ಮಾಧ್ಯಮ ಸಹಭಾಗಿತ್ವದಲ್ಲಿ ‘ ಬದಲಾಗುತ್ತಿದೆ ಮಾಧ್ಯಮ, ಬೆಳೆಸಿಕೊಳ್ಳಿ ಕೌಶಲ್ಯ – ಗಳಿಸಿ ಉದ್ಯೋಗವಕಾಶ ಎಂಬ ವಿಶೇಷವಾದ ಮಾಧ್ಯಮ ಕಾರ್ಯಾಗಾರವು ಮಾ. 14 ರಂದು ನಿನಾದದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುದ್ದಿ ಬಿಡುಗಡೆಯ ಮಾಲಕರು ಹಾಗೂ ಸಂಪಾದಕರಾದ ಡಾ.ಯು.ಪಿ.ಶಿವಾನಂದ್ ಅವರು ನೆರವೇರಿಸಿದರು.
” ಒಬ್ಬ ಉತ್ತಮ ಜನ೯ಲಿಸ್ಟ್ ಆಗಬೇಕೆಂದರೆ ಅವನು ಪತ್ರಿಕೋದ್ಯಮವನ್ನೇ ಕಲಿತಿರ ಬೇಕಾಗಿಲ್ಲ. ಅವನಲ್ಲಿರುವ ಗ್ರಹಿಸುವ ಶಕ್ತಿ, ದೃಢತೆ ಮತ್ತು ಸತ್ಯವನ್ನು ತಿಳಿದುಕೊಂಡು ಸಮಾಜದ ಮುಂದೆ ಇರಿಸುವ ಬದ್ಧತೆ ಇದ್ದರೆ ಆಯಿತು. ನಮ್ಮ ಪತ್ರಿಕಾ ಸಂಸ್ಥೆಯಲ್ಲಿ ಜರ್ನಲಿಸಂ ಕಲಿತವರು ಇಲ್ಲ. ಬಂದು ಸೇರಿದವರೂ ಬಿಟ್ಟು ಹೋಗುತ್ತಾರೆ. ನಮ್ಮ ಮುಖ್ಯ ವರದಿಗಾರರು ಕೂಡ ಅನುಭವ ಮತ್ತು ಜನರ ಒಡನಾಟದಿಂದಲೇ ವರದಿಗಾರರಾಗಿ ರೂಪುಗೊಂಡವರು. ಇಂದು ಅವರ ವರದಿಗೆ ಜಿಲ್ಲೆಯಲ್ಲಿ ರಾಜ್ಯದಲ್ಲಿ ವಿಶೇಷ ಮನ್ನಣೆ ಇದೆ. ಯಾಕೆಂದರೆ ಅವರು ಯಾವುದೇ ಘಟನೆಯ ವರದಿ ಬರೆದರೂ ಅದು ಕಣ್ಣಿಗೆ ಕಟ್ಟಿದಂತಿರುತ್ತದೆ. ಎಂದು ಹೇಳಿದ ಡಾ.ಶಿವಾನಂದರು ಪತ್ರಕರ್ತರಾಗುವವರು ವಾಟ್, ವೆನ್, ವೈ, ಹೌ ಎಂಬುದರ ಜತೆಗೆ ರೋಟರಿಯ ಧ್ಯೇಯ ವಾಕ್ಯಗಳಾದ ಇದು ನಿಜವೇ, ಇದರಿಂದ ಸಮಾಜಕ್ಕೆ ಪ್ರಯೋಜನವಿದೆಯೇ ಎಂಬ ಪ್ರಶ್ನೆಗಳನ್ನೂ ತಮಗೆ ತಾವೇ ಕೇಳಿಕೊಂಡು ವರದಿ ತಯಾರಿಸಬೇಕು ಎಂದರು.
ಜೀವನಕ್ಕೆ ಗುರಿ ಅವಶ್ಯಕ. ಶಾಲೆ ಕಾಲೇಜು ಇದೆಯೆಂದು ಅಲ್ಲಿಗೆ ಹೋಗಿ ಕಲಿಯುವುದು, ಸಂಪಾದನೆಗಾಗಿ ಉದ್ಯೋಗ ಹುಡುಕಿಕೊಳ್ಳುವುದು, ಸಂಸಾರ ನಡೆಸುವುದು ಇದು ಸಾಧನೆ ಎನಿಸುವುದಿಲ್ಲ. ಏನಾದರೂ ವಿಶೇಷವಾದ ಸಾಧನೆಯ ಗುರಿ ಇರಿಸಿಕೊಳ್ಳಬೇಕು.

 

ಆ ಗುರಿ ಸಾಧನೆಯ ಹಾದಿಯಲ್ಲಿ ಎಂತಹ ಕಷ್ಟ ಎದುರಾದರೂ, ಗುರಿ ಮುಖ್ಯವಾದಾಗ ಕಷ್ಟಗಳನ್ನು ದಾಟಿ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಶ್ರೀಮತಿ ಸುಷ್ಮಾ ಸತೀಶ್ ಸ್ವಾಗತಿಸಿದರು. ನಿನಾದ ಸಾಂಸ್ಕೃತಿಕ ಕೇಂದ್ರದ ರೂವಾರಿ ವಸಂತ ಶೆಟ್ಟಿ ಬೆಳ್ಳಾರೆ ಪ್ರಾಸ್ತಾವಿಕ ಮಾತನಾಡಿ ತಮ್ಮ ಕನಸುಗಳ ಬಗ್ಗೆ ಹೇಳಿಕೊಂಡರು.

ನಿನಾದ ಅಧ್ಯಕ್ಷ ಪಿ.ಎ.ಶೆಟ್ಟಿ , ಉಪಾಧ್ಯಕ್ಷ ವಾಸಪ್ಪ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ , ನಿನಾದದ ಟ್ರಸ್ಟಿ ಹಿತೈಷಿ ಶೆಟ್ಟಿ , ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ವಿಜಯಲಕ್ಷ್ಮಿ ಶಿಬರೂರು ಮತ್ತು ಆಲ್ವಿನ್ ಮೆಂಡೋನ್ಸಾ , ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಅಧ್ಯಕ್ಷ ಉಮೇಶ್ ಮಣಿಕ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಕ.ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು.

ವಿಜಯ ಟೈಮ್ಸ್ ನ ಮುಖ್ಯ ಸಂಪಾದಕರಾಗಿರುವ ಸೃಷ್ಠಿ ಮೀಡಿಯಾ ಅಕಾಡೆಮಿ ಮುಖ್ಯಸ್ಥೆ ವಿಜಯಲಕ್ಷ್ಮಿ ಶಿಬರೂರು ತಮ್ಮ ಜೀವನದ ವೃತ್ತಿ ಕುರಿತು ಹಾಗೂ ಪತ್ರಿಕೋದ್ಯಮದ ಕುರಿತು , ವಿಶೇಷವಾಗಿ ತನಿಖಾ ಪತ್ರಿಕೋದ್ಯಮದ ಕುರಿತು ಮಾಹಿತಿ ನೀಡಿದರು. ವರದಿಗಾರಿಕೆ, ನಿರೂಪಣೆ, ಮೊಬೈಲ್ ನಲ್ಲಿ ವೀಡಿಯೊಗಳನ್ನು ಮಾಡುವ ರೀತಿ, ಆಧುನಿಕ ಮಾಧ್ಯಮವನ್ನು ಬಳಸಿಕೊಳ್ಳುವ ವಿಧಾನವನ್ನು ಹೇಳಿಕೊಟ್ಟರು.
ಇನ್ನೋವ೯ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಿಜಿಟಲ್ ಮೀಡಿಯಾ ಎಕ್ಸ್ಪರ್ಟ್ ಅಲ್ವಿನ್ ಮೆಂಡೋನ್ಸಾರವರು ಮಾತನಾಡಿ ಸಾಮಾಜಿಕ ಜಾಲತಾಣಗಳ ಬಳಕೆ, ಹಾಗೂ ಯಾವ ರೀತಿಯಾಗಿ ಅದನ್ನು ಬಳಸಿಕೊಂಡು ಹಣವನ್ನು ಗಳಿಸಬಹುದೆಂಬ ಮಾಹಿತಿ ನೀಡಿದರು. ಹೊಸ ಹೊಸ ಟೆಕ್ನಾಲಜಿಯ ಪರಿಚಯವನ್ನು ಮಾಡಿಕೊಟ್ಟರು. ತಮ್ಮ ಜೀವನದಲ್ಲಿ ಪತ್ರಿಕೋದ್ಯಮದ ಪಾತ್ರವನ್ನು, ಅನುಭವವನ್ನು ಹಂಚಿಕೊಂಡರು.
ನಂತರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಸ್ಪರ್ಧೆಯನ್ನು ಆಯೋಜಿಸಿ ಬೆಸ್ಟ್ ಆ್ಯಂಕರ್, ಬೆಸ್ಟ್ ರಿಪೋರ್ಟರ್, ಬೆಸ್ಟ್ ಟೀಮ್ ಬಹುಮಾನವನ್ನು ನೀಡಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಯೂನಿಯನ್ ದ. ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡು ವಹಿಸಿ ಸಮಾರೋಪ ಭಾಷಣ ಮಾಡಿದರು. ಜನ೯ಲಿಸ್ಟ್ ಎಲ್ಲವನ್ನೂ ಪ್ರಶ್ನಿಸುವವನಾಗಬೇಕು. ನಿಷ್ಪಕ್ಷಪಾತವಾಗಿ ಎಲ್ಲವನ್ನೂ ನಿಭಾಯಿಸಬೇಕು. ಜನರಿಗೆ ಅಗತ್ಯವಿರುವ ಮಾಹಿತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರಾಗಿರುವ ಐತ್ತಪ್ಪ ಶೆಟ್ಟಿ, ಉಪಾಧ್ಯಕ್ಷ ವಾಸಪ್ಪ ಶೆಟ್ಟಿ, ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ, ಪ್ರಮೋದ್ ರೈ ಉಪಸ್ಥಿತರಿದ್ದರು.
ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾಣಿಯೂರು, ವಿವೇಕಾನಂದ ಕಾಲೇಜು ಪುತ್ತೂರು, ಶಿವರಾಮ ಕಾರಂತ ಪದವಿ ಕಾಲೇಜು ಪೆರುವಾಜೆ, ಕೆ.ಎಸ್.ಎಸ್. ಕಾಲೇಜು ಸುಬ್ರಮಣ್ಯ, ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ, ಜ್ಞಾನ ದೀಪ ವಿದ್ಯಾಕೇಂದ್ರ ಬೆಳ್ಳಾರೆ ಇಲ್ಲಿನ ಆಸಕ್ತ ವಿದ್ಯಾರ್ಥಿಗಳು, ಅಧ್ಯಾಪಕರು, ಆಸಕ್ತ ಸಾರ್ವಜನಿಕರು, ಪತ್ರಕರ್ತರು, ಊರವರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ನಿನಾದದ ವತಿಯಿಂದ ಮಾಡಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಿಗೆ ಪುಸ್ತಕವನ್ನು ನೀಡಿ ಗೌರವಿಸಲಾಯಿತು. ಜಯಶ್ರೀ ಪ್ರಭಾಕರ್ ಪಂಜಿಗಾರು ಪ್ರಾರ್ಥನೆಗೈದರು. ವಸಂತ ಶೆಟ್ಟಿ ಬೆಳ್ಳಾರೆ ವಂದಿಸಿದರು.
ರಾತ್ರಿ ಜಾದೂಗಾರ ಕುದ್ರೋಳಿ ಗಣೇಶ್ ತಂಡದವರಿಂದ ಮಸ್ತ್ ಮ್ಯಾಜಿಕ್ ಜಾದೂ ಕಾರ್ಯಕ್ರಮ ಪ್ರದರ್ಶನ ಗೊಂಡಿತು. ಇದರ ನಿರೂಪಣೆಯನ್ನು ಶ್ರೀಮತಿ ವಿನಯ ರವರು ನೆರವೇರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.