ಬೂಡು– ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು – ಬೆಳ್ಳಾರೆಯಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ.14 ಮತ್ತು ಮಾ.15 ರಂದು ನಡೆಯಿತು.
ಮಾ.14 ರಂದು ಸಂಜೆ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೂಡು ಬೆಳ್ಳಾರೆ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷ ಸುಂದರ ತೊಡಿಕಾನ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಬಿ.ಇ.ಎಂ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ನೆರವೇರಿಸಿದರು.
ಕು.ಚೈತ್ರಾ, ಪ್ರಜ್ವಲ್ ಸಿ.ವಿ, ಶರತ್ ಕೆ., ಸುದರ್ಶನ್ ಬಿ.ಕೆ, ಸುಮಂತ್ ಕೆ.ಸಾಗರ್ ಪಾಟಾಜೆಯವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಅಂತರಾಷ್ಟ್ರೀಯ ಓಟಗಾರ್ತಿ ಶ್ರೀಮತಿ ಕಮಲ ರಮೇಶ್ ಮುಪ್ಪೇರ್ಯ, ಕೊರೊನಾ ವಾರಿಯರ್ ಶ್ರೀಮತಿ ಗೀತಾ ರಮೇಶ್ ಪಾಟಾಜೆ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಪುಷ್ಪಾವತಿ ಚೀಮುಳ್ಳು ರವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಾಕ್ಷಿ, ಎಂ.ಮಾಧವ ಗೌಡ ಕಾಮಧೇನು, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ಧ.ಗ್ರಾ.ಯೋಜನೆಯ ಬೆಳ್ಳಾರೆ ಒಕ್ಕೂಟದ ಸೇವಾ ಪ್ರತಿನಿಧಿ ಪವಿತ್ರಾ ಪಾಟಾಜೆ, ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ ಗೌರವಾಧ್ಯಕ್ಷ ಕರಿಯ ಬೀಡು, ಕಾರ್ಯದರ್ಶಿ ವಿಜಯ್ ಪಾಟಾಜೆ, ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ಕೂಸಪ್ಪ ಪುಡ್ಕಜೆ, ಅಧ್ಯಕ್ಷ ನಾರಾಯಣ ಬೊಳಿಯಮೂಲೆ,ಕಾರ್ಯದರ್ಶಿ ಯಶವಂತ ಕಲಾಯಿ, ಗೌರವಾಧ್ಯಕ್ಷ ಐತ್ತ ಪಾಟಾಜೆ, ಕಾರ್ಯದರ್ಶಿ ಕುಸುಮಾ ಬೀಡು, ಅಧ್ಯಕ್ಷೆ ರಾಧಾ ಕಲಾಯಿ ಉಪಸ್ಥಿತರಿದ್ದರು.
ಸುಮಿತ್ರ ಬೂಡು ಸ್ವಾಗತಿಸಿ, ಸಾಗರ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.

ಕಾರ್ಯಕ್ರಮಗಳು

ಬೆಳಿಗ್ಗೆ ಗಂಟೆ 8.00 ಕ್ಕೆ ಗೊನೆ ಮುಹೂರ್ತ ನಡೆಯಿತು.
ನಂತರ ಜಾಗದ ಪಂಜುರ್ಲಿಗೆ ತಂಬಿಲ ಮಧ್ಯಾಹ್ನ ಗುಳಿಗ ದೈವದ ಎಣ್ಣೆ ಬೂಳ್ಯ, ಸಂಜೆ ಗಂಟೆ 4.00 ಕ್ಕೆ ಗುಳಿಗ ದೈವದ ನೇಮೋತ್ಸವ ನಡೆಯಿತು. ನಂತರ ಶ್ರೀ ಮೊಗೇರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ ಬೂಳ್ಯ ನಡೆಯಿತು.
ರಾತ್ರಿ ಗಂಟೆ 8.30 ಕ್ಕೆ ಶ್ರೀ ಮೊಗೇರ್ಕಳ ದೈವಗಳ ಭಂಡಾರ ತೆಗೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು ರಾತ್ರಿ ಗಂಟೆ 12.00 ಕ್ಕೆ ಶ್ರೀ ತನ್ನಿಮಾಣಿಗ ದೈವವು ಗರಡಿ ಇಳಿದ ಬಳಿಕ ಪ್ರಸಾದ ವಿತರಣೆ ನಡೆಯಿತು.
ಮಾ.15 ರಂದು ಬೆಳಿಗ್ಗೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.