ಎನ್ನೆಂಸಿಯಲ್ಲಿ 2003ನೇ ಬಿ.ಕಾಂ.ಬ್ಯಾಚ್ ನ ಸಮಾಗಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಂಸ್ಥೆಯ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿಗಳ ಮಹತ್ವದ ಪಾತ್ರ- ಬಾಲಚಂದ್ರ ಗೌಡ
ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ 2003 ನೇ ಬ್ಯಾಚ್ ನ ಬಿ.ಕಾಂ. ವಿದ್ಯಾರ್ಥಿಗಳ ಸಮಾಗಮ ಮಾ.14ರಂದು ಎನ್ನೆಂಸಿಯಲ್ಲಿ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸುಮಾರು 20 ಮಂದಿ ಒಂದೆಡೆ ಸೇರಿ ತಮ್ಮತಮ್ಮ ಕಾರ್ಯಕ್ಷೇತ್ರದ ಅನುಭವ,ಸಂತೋಷವನ್ನು ಹಂಚಿಕೊಂಡರು.
ಸಮಾಗಮ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲರಾದ ಪ್ರೋ.ಬಾಲಚಂದ್ರ ಗೌಡ ಉದ್ಘಾಟಿಸಿ ಮಾತನಾಡಿ ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಳೆ ವಿದ್ಯಾರ್ಥಿಗಳೂ ಮಹತ್ವದ ಪಾತ್ರ ವಹಿಸುತ್ತಾರೆ.ನಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದನ್ನು ಕಂಡಾಗ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು. ಪ್ರಾಂಶುಪಾಲ ಡಾ.ಪೂವಪ್ಪ ಕಣಿಯೂರು ಶುಭ ಹಾರೈಸಿದರು.ವಿಶ್ರಾಂತ ಪ್ರಾಂಶುಪಾಲರುಗಳಾದ ಡಾ.ಪ್ರಭಾಕರ ಶಿಶಿಲ,ಪ್ರೊ.ಬೆಳ್ಯಪ್ಪ ಗೌಡ, ಉಪನ್ಯಾಸಕರುಗಳಾದ ಪ್ರೊ.ಸಂಜೀವ ಕುದ್ಪಾಜೆ, ಪ್ರೊ.ರತ್ನಾವತಿ,ಪ್ರೊ.ಪ್ರೇಮಲತಾ ಉಪಸ್ಥಿತರಿದ್ದರು.
ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳ ಜತೆಗಿನ ಬಾಂಧವ್ಯಗಳ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು.ಪಾಠ ಮಾಡಿದ ಗುರುಗಳನ್ನು ಹಳೆ ವಿದ್ಯಾರ್ಥಿಗಳು ಗೌರವಿಸಿದರು.ಹಳೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಲಾಯಿತು.
ಹಿರಿಯ ವಿದ್ಯಾರ್ಥಿಗಳಾದ ಸತೀಶ್ ಸ್ವಾಗತಿಸಿ,ಬಶೀರ್ ಕಾರ್ಯಕ್ರಮ ನಿರೂಪಿಸಿದರು.ಸುಹಾಸ್ ಸವಣೂರು ಕಾರ್ಯಕ್ರಮ ಸಂಘಟಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.