ಜೇಸಿಐ ಸುಳ್ಯ ಪಯಸ್ವಿನಿ,
ಗ್ರಾಮ ಪಂಚಾಯತ್ ಮಂಡೆಕೋಲು ಹಾಗೂ
ಪಶು ವೈದ್ಯಕೀಯ ಆಸ್ಪತ್ರೆ ಸುಳ್ಯ ಇದರ ವತಿಯಿಂದ ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಹುಚ್ಚು ನಾಯಿ ವಿರುದ್ದ ರೋಗ ನಿರೋಧಕ ಉಚಿತ ಚುಚ್ಚು ಮದ್ದು ಲಸಿಕಾ ಶಿಬಿರವನ್ನು ಏರ್ಪಾಡಿಸಲಾಗಿತ್ತು. ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜೇಸಿ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಉಚಿತ ಲಸಿಕಾ ಶಿಬಿರವು ಗ್ರಾಮದ ಆರೋಗ್ಯ ವೃದ್ದಿಗೆ ಸಹಕಾರಿಯಾದ ಕಾರ್ಯಕ್ರಮ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸುಳ್ಯದ ಪಶು ವೈದ್ಯಾಧಿಕಾರಿ ಡಾ ನಿತಿನ್ ಪ್ರಭು ರವರು ಲಸಿಕೆ ನೀಡುವ ಮಹತ್ವ ವಿವರಿಸುತ್ತಾ ಪೂರ್ವದಲ್ಲಿ ಲಸಿಕೆ ನೀಡಿ ಶ್ವಾನಗಳ ಆರೋಗ್ಯ ಕಾಪಾಡುವುದು ಅಗತ್ಯ ಎಂದರು. ಮಂಡೆಕೋಲು PDO ರವರು ಸಹಕರಿಸಿದರು. ಜೇಸಿ ಅಧ್ಯಕ್ಷ ಜೇಸಿ ಗುರುರಾಜ್ ಅಜ್ಜಾವರ ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಜೇಸಿ ನಿಕಟಪೂರ್ವ ಅಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆ ವಂದಿಸಿದರು. ನಂತರ ಶಿವಾಜಿ ನಗರ, ಡೆಂಜಿಗುರಿ,ಮಾರ್ಗ, ಮೈತಡ್ಕ ಪೇರಾಲು, ಕನ್ಯಾನ ಬೊಲುಗಲ್ಲು , ಪೆರಾಜೆ ಮುಂತಾದ ಕಡೆಗಳಲ್ಲಿ ಲಸಿಕಾ ಶಿಬಿರ ನಡೆಯಿತು. ಡಾ ನಿತಿನ್ ಪ್ರಬು ಹಾಗೂ ಪಾಲಾಕ್ಷ ಸಹಕರಿಸಿದರು.