Breaking News

*ಮುಕ್ಕೂರಿನಲ್ಲಿ ಕಾಂಗ್ರೆಸ್ ಅಭಿನಂದನಾ ಕಾರ್ಯಕ್ರಮ*

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

*ಪೆರುವಾಜೆ ಗ್ರಾ. ಪಂ.ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರಿಗೆ ಅಭಿನಂದನೆ*

*ಜಗನ್ನಾಥ ಪೂಜಾರಿ ಭಾಗಿ; ಬಿಜೆಪಿ ಸೇರುವರೆಂಬ ವದಂತಿಗೆ ತೆರೆ?*

ಕಾಂಗ್ರೆಸ್ ಗ್ರಾಮ ಸಮಿತಿ ಪೆರುವಾಜೆ,ಬ್ಲಾಕ್ ಕಾಂಗ್ರೆಸ್ ಸುಳ್ಯ, ಬೂತ್ ಸಮಿತಿ ಮುಕ್ಕೂರು ಇದರ ವತಿಯಿಂದ ಪೆರುವಾಜೆ ಗ್ರಾಮದ ಮುಕ್ಕೂರು ಇಲ್ಲಿನ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಮತ್ತು ವಿಜೇತ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ‌ ಕಾರ್ಯಕ್ರಮವು ಮಾ.15 ರಂದು ಮುಕ್ಕೂರಿನಲ್ಲಿ ನಡೆಯಿತು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 


ಕೆ.ಪಿ.ಸಿ.ಸಿ.ಸದಸ್ಯ ವೆಂಕಪ್ಪ ಗೌಡ, ಕೆ.ಪಿ.ಸಿ.ಸಿ.ಪ್ಯಾನಲಿಸ್ಟ್ ಸದಸ್ಯ ಭರತ್ ಮುಂಡೋಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಕಾಮತ್,ಶ್ರೀಮತಿ ರಾಜೀವಿ ಆರ್.ರೈ., ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,ಬ್ಲಾಕ್ ವಕ್ತಾರ ನಂದರಾಜ್ ಸಂಕೇಶ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಬೆಳ್ಳಾರೆ ಸಿ.ಎ.ಬ್ಯಾಂಕಿನ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಅನುಸೂಯ,ವಾರ್ಡ್ ಅಧ್ಯಕ್ಷ ವೆಂಕಪ್ಪ ಗೌಡ ಪೆರ್ಜಿ, ಗಫೂರ್ ಸಾಹೆಬ್ ಪಾಲ್ತಾಡು , ಹಿರಿಯ ಕಾಂಗ್ರೆಸಿಗ ಹಾಜಿ ಅಬ್ದುಲ್ ರಹಿಮಾನ್,ಸುಳ್ಯ ಎಸ್.ಸಿ.ಘಟಕದ ಅಧ್ಯಕ್ಷ ಆನಂದ ಬೆಳ್ಳಾರೆ ಉಪಸ್ಥಿತರಿದ್ದರು.

 

*ಅಭಿನಂದನೆ*
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ , ಸದಸ್ಯರಾದ ಶ್ರೀಮತಿ ಗುಲಾಬಿ ಬೊಮ್ಮೆಮಾರು, ಸಚಿನ್ ರಾಜ್ ಶೆಟ್ಟಿ, ಶಹನಾ‌‌ಝ್ ಹಾಗೂ ಸರಿತ ಕುಂಡಡ್ಕರವರನ್ನು ಅಭಿನಂದಿಸಲಾಯಿತು.
ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ಇಕ್ಬಾಲ್ ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.

ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಗದ್ದುಗೆಗೇರಿ ಬಳಿಕ ಬಿಜೆಪಿ ಸೇರುವರೆಂಬ ಪ್ರಚಾರದಲ್ಲಿದ್ದ ಜಗನ್ನಾಥ ಪೂಜಾರಿ ಮತ್ತು ಅವರ ಬೆಂಬಲಿಗ ಸದಸ್ಯರು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಕುರಿತ ವದಂತಿಗಳಿಗೆ ತೆರೆ ಎಳೆದಂತಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.