ಕೊಳವೆ ಬಾವಿಗೆ ಶೀಘ್ರದಲ್ಲೇ ಪಂಪ್ ಅಳವಡಿಸುವಂತೆ ಎಸ್.ಡಿ.ಪಿ.ಐ.ಯಿಂದ ಎಡಮಂಗಲ ಗ್ರಾಮ ಪಂಚಾಯತ್‌ಗೆ ಮನವಿ

Advt_Headding_Middle
Advt_Headding_Middle

 

ಸಮಸ್ಯೆ ಇತ್ಯರ್ಥ ವಾಗದಿದ್ದಲ್ಲಿ ಹೋರಾಟದ ಎಚ್ಚರಿಕೆ

ಎಡಮಂಗಲ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಎಣ್ಮೂರು ಗ್ರಾಮದ ಉಳ್ಳಲಾಡಿ ಎಂಬಲ್ಲಿ ಕೊಳವೆಬಾವಿಗೆ ಪಂಪ್ ಅಳವಡಿಸುವಂತೆ ಎಸ್.ಡಿ.ಪಿ.ಐ.ಯಿಂದ ಎಡಮಂಗಳ ಗ್ರಾಮ ಪಂಚಾಯತ್ ಗೆ ಮಾ. ೩ರಂದು ಮನವಿ ಸಲ್ಲಿಸಲಾಯಿತು.
ಆ ಭಾಗದಲ್ಲಿ ಸುಮಾರು 25 ಮನೆಗಳಿದ್ದು, ನೀರಿಗಾಗಿ ನಿತ್ಯ ಪರಿತಪಿಸುವಂತಾಗಿದೆ, ಎರಡು ವರ್ಷಗಳ ಹಿಂದೆಯೇ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಕೊಳವೆಬಾವಿ ಕೊರೆಯಲಾಗಿತ್ತು. ಆದರೆ ಇಂದಿನವರೆಗೂ ಅದಕ್ಕೆ ಮೋಟಾರ್ ಅಳವಡಿಸದೆ ನಿರ್ಲಕ್ಷ್ಯ ತೋರಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಈ ಬಾಗದ ಜನರು ಪ್ರತೀ ದಿನ ನೀರಿಗಾಗಿ ಕಷ್ಟಪಡುವಂತಾಗಿದೆ.
ಸದ್ಯಕ್ಕೆ ಒಂದು ಕೈ ಕೊಳವೆಬಾವಿ ಇದ್ದು, ಅದರಲ್ಲಿ ಒಂದು ಹನಿ ನೀರು ಬರಬೇಕಾದರು ಹತ್ತು ನಿಮಿಷ ಕಾಯಬೇಕಾಗುತ್ತದೆ. ಅದನ್ನೇ ನಂಬಿರುವ ಈ ಕುಟುಂಬಗಳು ಕೊಳವೆವಾವಿಯ ಹಿಂದೆ ಕೊಡಪಾನ ಹಿಡಿದುಕೊಂಡು ಸಾಲುಗಟ್ಟಿ ನಿಲ್ಲಬೇಕಾದಂತಹ ದುಸ್ಥಿತಿ ಬಂದೊದಗಿದೆ. ಅದಲ್ಲದೇ ಈ ಕೊಳವೆ ಬಾವಿಯ ನೀರು ಕಬ್ಬಿಣದ ವಾಸನೆ ಬರುವುದರಿಂದ ಕುಡಿಯಲು ಅಷ್ಟು ಯೋಗ್ಯವಲ್ಲ, ಆದರೆ ಅನಿವಾರ್ಯವಾಗಿ ಅದನ್ನೇ ಕುಡಿಯುವಂತಾಗಿದೆ.
ಈ ಹಿಂದೆ ಈ ಗ್ರಾಮ ಎಣ್ಮೂರು ಗ್ರಾಮ ಪಂಚಾಯತ್‌ಗೆ ಒಳಪಟ್ಟಿತ್ತು, ಅಲ್ಲಿಯ ಅಧಿಕಾರಿಗಳಲ್ಲಿ ವಿಚಾರಿಸುವಾಗ ಅದಕ್ಕೆ ಸಂಬಂದಪಟ್ಟ ಎಲ್ಲಾ ಕಡತಗಳನ್ನು ಎಡಮಂಗಳ ಗ್ರಾಮ ಪಂಚಾಯತ್‌ಗೆ ವರ್ಗಾಯಿಸಿದ್ದೇವೆ ಎಂದು ಮೌಖಿಕವಾಗಿ ತಿಳಿಸಿರುತ್ತಾರೆ.
ಹಾಗಾಗಿ ಸಂಬಂಧಪಟ್ಟವರು ಈ ಕೂಡಲೇ ಗಮನಹರಿಸಿ ಇಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ, ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ಸ್ಥಳೀಯ ನಾಗರಿಕರನ್ನು ಸೇರಿಸಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಎಣ್ಮೂರು ವಲಯಧ್ಯಕ್ಷರಾದ ಹಮೀದ್ ಮರಕ್ಕಡ, ವಲಯ ಸಮಿತಿ ಸದಸ್ಯ ಹಮೀದ್ ಕಲ್ಲೇರಿ, ಶರೀಫ್ ಗುತ್ತಿಗೆ ಮತ್ತು ನೀರು ಬಳಕೆದಾರರಾದ ಅಬ್ದುಲ್ಲ ಕುಂಞಿ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.