ಮಾ. 13, 14ರಂದು ಬೆಂಗಳೂರಿನಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ ನಲ್ಲಿ ಭಾಗವಹಿಸಿದ ಶ್ರೀಮತಿ ಸರಸ್ವತಿ ಕಾಮತ್ ರವರು ಹರ್ಡಲ್ಸ್ ನಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಪ್ರಥಮ, 100 ಮೀ. ಓಟದಲ್ಲಿ ದ್ವೀತಿಯ ಮತ್ತು ಮಿಕ್ಸ್ ಡ್ ರಿಲೆಯಲ್ಲಿ ದ್ವಿತೀಯ ಸ್ಥಾನಪಡೆದು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಳಿಲ ಗ್ರಾ.ಪಂ. ಸದಸ್ಯರಾಗಿರುವ ಇವರು ಮಾಜಿ ಜಿ.ಪಂ. ಸದಸ್ಯೆ ಹಾಗೂ ರಾಜಕೀಯ ಮುಂದಾಳು ಚಂದ್ರಶೇಖರ ಕಾಮತ್ ರವರ ಪತ್ನಿ.