ಗೇರು ಬೀಜ ಹೆಕ್ಕಲು ಹೋದ ಮಹಿಳೆಗೆ ಪಕ್ಕದ ಮನೆಯ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಪೆರಾಜೆಯಿಂದ ವರದಿಯಾಗಿದೆ.
ಪೆರಾಜೆಯ ಕಲ್ಲುಚೆರ್ಪೆಯ ಕೆಲೆಟ್ ಕ್ರಿಸ್ತ ಎಂಬವರು ತಮ್ಮ ಜಾಗದ ಗೇರುಬೀಜ ಹೆಕ್ಕಲು ಕಲ್ಲುಚರ್ಪೆಯ ಗೀತಾ ಎಂಬವರಿಗೆ ಹೇಳಿದ್ದರೆಂದೂ ಅದರಂತೆ ಅವರು ಮಾ.14ರಂದು ಗೇರು ಬೀಜ ಹೆಕ್ಕುತ್ತಿದ್ದ ವೇಳೆ ಪಕ್ಕದ ಮನೆಯ ಅಶ್ವಥ್ ಎಂಬ ಯುವಕ ಆಕ್ಷೇಪಿಸಿದರೆಂದೂ ಏಕಾ ಏಕಿ ಬಂದು ಹಸಿಮರದ ಬಡಿಗೆಯಿಂದ ಬೆನ್ನಿಗೆ ಹೊಡೆದರೆನ್ನಲಾಗಿದೆ. ಗೀತಾರವರು ಬೊಬ್ಬೆ ಹೊಡೆದಾಗ ಮನೆಯವರು ಮತ್ತು ಪಕ್ಕದ ಮನೆಯವರು ಬಂದರೆಂದೂ ಬಳಿಕ ಅವರನ್ನು ಮನೆಯವರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿ ಪೋಲೀಸ್ ದೂರು ನೀಡಿದರೆಂದು ತಿಳಿದು ಬಂದಿದೆ.
ಮರುದಿನ ಅಶ್ವಥ್ ನನ್ನು ವಶಕ್ಕೆ ಪಡೆದ ಪೋಲೀಸರು ವಿಚಾರಿಸಿ, ಪೋಲಿಸ್ ರುಚಿ ತೋರಿಸಿ ಎಚ್ಚರಿಕೆ ನೀಡಿ ಕಳುಹಿದ್ದಾರೆಂದು ತಿಳಿದು ಬಂದಿದೆ.