ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರುಗೆ ಸನ್ಮಾನ ಕಾರ್ಯಕ್ರಮ ಮಾ. 3ರಂದು ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಶ್ರೀಮತಿ ಸುಭದ್ರ ಶ್ರೀಧರ್ ಪುಚ್ಚಪ್ಪಾಡಿ ನಿವೃತ್ತ ಮುಖ್ಯೋಪಾಧ್ಯಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ದರು .ಮುಖ್ಯ ಅತಿಥಿಗಳಾಗಿ ಪದ್ಮನಾಭ ಶೆಟ್ಟಿ ಪೆರುವಾಜೆ, ಶ್ರೀಮತಿ ರೇವತಿ ಮಠತ್ತಡ್ಕ, ಶ್ರೀಮತಿ ಅಕ್ಷತಾ ಉಪಸ್ಥಿತರಿದ್ದರು.ಉದ್ಘಾಟನಾ ಕಾರ್ಯಕ್ರಮದ ನಂತರ ಒಳಾಂಗಣ ಆಟಗಳು ನಡೆದವು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷರಾಗಿ ಶ್ರೀಮತಿ ಅಶ್ವಿನಿ, ಮುಖ್ಯ ಭಾಷಣ ಕಾರರಾಗಿ ಅಶ್ವಿನಿ ಕೋಡಿಬೈಲು (ಯುವ ಕವಯಿತ್ರಿ) ಮುಖ್ಯ ಅತಿಥಿಗಳಾಗಿ ಶ್ರೀಮತಿ ಭಾಗ್ಯಶ್ರೀ ಅರ್ನಾಡಿ, ವಾಸುದೇವ ಆಚಾರ್ಯ, ಸುನಿಲ್ ರೈ ಮಾಜಿ ಉಪಾಧ್ಯಕ್ಷರು ಪೆರುವಾಜೆ ಗ್ರಾಮ ಪಂಚಾಯತ್,ಚಂದ್ರಾವತಿ ಇಟ್ರಾಡಿ, ಗ್ರಾಮ ಪಂಚಾಯತ್ ಸದಸ್ಯರು ಪೆರುವಾಜೆ ಉಪಸ್ಥಿತರಿದ್ದರು ಒಳಾಂಗಣ ಆಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ನಂತರ ಮಹಿಳಾ ಸಾಧಕರಾದ
ಶ್ರೀಮತಿ ಗಿರಿಜಾ ಕೊರಗಪ್ಪ ಮೂಲ್ಯ (ಬಾಣಂತಿ ಶುಶ್ರುಷಕಿ)
ಶ್ರೀಮತಿ ವಿಜಯ ಕುಮಾರಿ ( ಅಂಗನವಾಡಿ ಕಾರ್ಯಕರ್ತೆ)
ಶ್ರೀಮತಿ ಮೆಚ್ಚು ಮುಂಡಾಜೆ(ರಾಜಕೀಯ)
ಶ್ರೀಮತಿ ರಾಗಿಣಿ(ಕೊರೊನಾ ವಾರಿಯರ್ಸ್)
ಶ್ರೀಮತಿ ಪ್ರೇಮ ಮಠತ್ತಡ್ಕ(ಶಾಲಾ ಅಡುಗೆ ಸಹಾಯಕಿ) ಇವರಿಗೆ
ಸನ್ಮಾನ ಕಾರ್ಯಕ್ರಮ ನಡೆಯಿತು. ನಂತರ ಭೋಜನ ಕಾರ್ಯಕ್ರಮ ನಡೆಯಿತು ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.