ಶ್ರೀ ಕ್ಷೇತ್ರ ಕೆಮ್ಮಲೆ ಹೇಮಳ, ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನ ಕೆಮ್ಮಲೆ ಬ್ರಹ್ಮರ ಮೂಲಸ್ಥಾನ ಹಾಗೂ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಮಹಾಪೂಜೆ ಹಾಗೂ ಸಾಮೂಹಿಕ ನಾಗತಂಬಿಲ ಸೇವೆಯು ಮಾ.27 ರಂದು ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯರ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಮಾ.27 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಲಿದೆ. ಸರ್ವಸೇವೆ, ನಾಗತಂಬಿಲ, ಪುಂಡಿಪಣವೆ, ಹಣ್ಣುಕಾಯಿ, ಮಂಗಳಾರತಿ, ಪಂಚಕಜ್ಜಾಯ ಪ್ರಾರ್ಥನೆ ಈ ಎಲ್ಲ ಕಾರ್ಯಕ್ರಮಗಳಲ್ಲಿ ಶ್ರೀದೇವರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕು. ಬೆಳಿಗ್ಗೆ ಬಾಗಿಲು ತೆರೆಯುವುದು, ಗಣಹೋಮ, ಕಲಶಪೂಜೆ, ಪಂಚಾಮೃತಾಭಿಷೇಕ, ಕಲಶಾಭಿಷೇಕ 11 ಗಂಟೆಗೆ ಬ್ರಹ್ಮರ ಮೂಲಸ್ಥಾನದಲ್ಲಿ ಪೂಜೆ, ಮಧ್ಯಾಹ್ನ ನಾಗಬ್ರಹ್ಮ ದೇವರ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.