ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿಯ ಶ್ರೀಕೃಷ್ಣ ಆರ್ಕೇಡ್ ನಲ್ಲಿ ಇಂಟರ್ ಸ್ಟೈಲ್ ಮಲ್ಟಿ ಬ್ರಾಂಡ್ ಶೋ ರೂಂ ಮಾ. 18ರಂದು ಶುಭಾರಂಭಗೊಂಡಿತು. ಬೆಳ್ಳಾರೆ ಪವಿತ್ರ ಶಿಲುಬೆ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ಪೌಲ್ ಡಿ’ಸೋಜ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಕೃಷ್ಣ ಆರ್ಕೆಡ್ ನ ಮಾಲಕರಾದ ಎಸ್.ಪಿ. ಮುರಳೀಧರ್ ಕೆಮ್ಮಾರ, ಸ್ನೇಹ ಇಲೆಕ್ಟ್ರಿಕಲ್ಸ್ ನ ಮಾಲಕರಾದ ಹೊನ್ನಪ್ಪ ಬೆಳ್ಳಾರೆ, ಶಿಶಿರ ಎಂಟರ್ಪ್ರೈಸಸ್ ನ ಪಾಲುದಾರರಾದ ಸದಾಶಿವ ನಾಯಕ್, ಎಸ್.ಎಂ.ಜಿ. ಅಟೋ ಸೆಕ್ಯೂರ್ ಮಾಲಕರಾದ ಲೋಹಿತ್ ಗೌಡ ಗುತ್ತು, ರೇಷ್ಮಾ ಫರ್ನಾಂಡೀಸ್ ಮಡಂಕಾಪು, ಶ್ರೀಮತಿ ಸೌಮ್ಯ ಮೆಲ್ಕಾರು, ಗುತ್ತಿಗೆದಾರ ವಿಶ್ವನಾಥ ಪೂಜಾರಿ, ನಾರಾಯಣ ನಾಯ್ಕ, ಹರೀಶ್ ತಂಟೆಪ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇಂಟರ್ ಸ್ಟೈಲ್ ಮಲ್ಟಿ ಬ್ರಾಂಡ್ ಶೋ ರೂಂ ನ ಮಾಲಕರಾದ ರೋಶನ್ ಫರ್ನಾಂಡೀಸ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಕ್ಲೆವಿನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಿ.ಸಿ. ರೋಡಿನಲ್ಲಿರುವ ಇಂಟರ್ ಸ್ಟೈಲ್ ಸಂಸ್ಥೆಯ ಸಹ ಸಂಸ್ಥೆಯಾಗಿ ಬೆಳ್ಳಾರೆಯಲ್ಲಿ ಕಾರ್ಯಾರಂಭಗೊಂಡಿರುವ ಇಂಟರ್ ಸ್ಟೈಲ್ ಮಲ್ಟಿ ಬ್ರಾಂಡ್ ಶೋ ರೂಂನಲ್ಲಿ ಎಲ್ಲಾ ಬ್ರಾಂಡ್ ನ ಗ್ರಾನೈಟ್, ಮಾರ್ಬಲ್ಸ್, ಡಿಜಿಟಲ್ ಟೈಲ್ಸ್, ವರ್ಟಿಪೈಡ್ ಟೈಲ್ಸ್, ಸೆರಾಮಿಕ್ಸ್, ತ್ರಿಡಿ ಟೈಲ್ಸ್, ಸ್ಯಾನಿಟರಿ ವೇರ್ಸ್, ಬಾತ್ ರೂಂ ಫಿಟಿಂಗ್ಸ್ ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದರು.