Breaking News

ಮಾ.28ರಂದು ಸುಳ್ಯದ ರಂಗಮನೆಯಲ್ಲಿ ಸಭಾ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಸಭಾ ನಿರ್ವಹಣೆ ಒಂದು ಕಲೆ. ಈ ಕಲೆಯನ್ನು ಕರಗತಗೊಳಿಸಲು ತರಬೇತಿ ಪಡೆದುಕೊಂಡರೆ ಉತ್ತಮ. ಈ ಹಿನ್ನಲೆಯಲ್ಲಿ ಮಾರ್ಚ್ 28 ರಂದು ಆದಿತ್ಯವಾರ ಸುಳ್ಯದ ರಂಗಮನೆಯಲ್ಲಿ ಒಂದು ದಿನದ ಸಭಾ ಕಾರ್ಯಕ್ರಮ ನಿರೂಪಣಾ ಕಾರ್ಯಾಗಾರ ನಡೆಯಲಿದೆ.
ಕಾರ್ಯಾಗಾರದ ಉದ್ಘಾಟನೆಯನ್ನು ಹಿರಿಯ ಕಾರ್ಯಕ್ರಮ ನಿರೂಪಕರು ಹಾಗೂ ಉದ್ಯಮಿಗಳಾದ ಎಂ.ಬಿ ಸದಾಶಿವರವರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕ್ರಮ ನಿರೂಪಕರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್ ಗಂಗಾಧರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ನಿರೂಪಕರು ಹಾಗೂ ಪ್ರಾಂಶುಪಾಲರಾದ ಸೀತಾರಾಮ ಕೇವಳ ಮಾತನಾಡಲಿದ್ದಾರೆ.
“ನಿರೂಪಣೆಯ ಮಹತ್ವ ಮತ್ತು ಅನಿವಾರ್ಯ” ಎನ್ನುವ ವಿಷಯದ ಮೊದಲ ಅವಧಿಯನ್ನು ಹಿರಿಯ ರಂಗ ನಿರ್ದೇಶಕರು ಹಾಗೂ ರಂಗಮನೆ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ, “ನಿರೂಪಣೆಯ ತಯಾರಿ ಮತ್ತು ವಿಧಾನ” ಎನ್ನುವ ಎರಡನೇ ಅವಧಿಯನ್ನು ನಿರೂಪಕರು ಹಾಗೂ ಲೇಖಕರಾದ ಡಾ.ಸುಂದರ ಕೇನಾಜೆ, “ನಿರೂಪಣಾ ತಂತ್ರ ಮತ್ತು ಪಾತ್ರ” ಎನ್ನುವ ಮೂರನೇ ಅವಧಿಯನ್ನು ನಿರೂಪಕರು ಹಾಗೂ ಮುಖ್ಯ ಶಿಕ್ಷಕರಾದ ಅಚ್ಯುತ ಅಟ್ಲೂರು, “ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿಕೆ”ಯ ನಾಲ್ಕನೇ ಅವಧಿಯನ್ನು ನಿರೂಪಕರು ಹಾಗೂ ಸಂಪನ್ಮೂಲ ವ್ಯಕ್ತಿಯಾದ ವಸಂತ ಏನೆಕಲ್ಲು ಇವರು ನಡೆಸಿಕೊಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಾನಲ್ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ನಿರೂಪಕರಾದ ದುರ್ಗಾ ಕುಮಾರ್ ನಾಯರ್ ಕೆರೆ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ನಿರೂಪಕರಾದ ಪ್ರದೀಪ್ ಕುಮಾರ್ ರೈ ಪನ್ನೆ ಮಾತನಾಡಲಿದ್ದಾರೆ.
ಪೂ ಗಂ 9.00ರಿಂದ ಸಂಜೆ 5 ವರೆಗೆ ನಡೆಯುವ ಈ ಕಾರ್ಯಾಗಾರದಲ್ಲಿ ಮೊದಲು ಹೆಸರು ನೊಂದಾಯಿಸಿದ 25 ಆಸಕ್ತರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಮಾರ್ಚ್ 26ಕ್ಕೂ ಮುನ್ನ 9448951859 ಅಥವಾ 9008160289 ಈ ಮೊಬೈಲ್ ಸಂಖ್ಯೆಗೆ ಹೆಸರು ನೊಂದಾಯಿಸಬಹುದು ಎಂದು ಸಂಘಟಕರು ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.