ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ವು ಮಾ.18 ಮತ್ತು 19ರಂದು ನಡೆಯಿತು.
ನಿನ್ನೆ ಮಾ.18ರಂದು ಕುಳಿಚಾಟ ನಡೆಯಿತು. ರಾತ್ರಿ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಹಾಗೂ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಭಾರ್ಗವ ರಾಮ ಯಕ್ಷಗಾನ ಪ್ರಸಂಗ ನಡೆಯಿತು.
ಇಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶ, ಮಾರಿಕಳ ಪ್ರವೇಶ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು.