ಪೈಚ್ಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ ಆಶ್ರಯದಲ್ಲಿ ನಡೆದ 14ನೇ ವರ್ಷದ ವಾರ್ಷಿಕ ಸ್ವಲಾತ್ ಹಾಗೂ ಮೂರು ದಿನಗಳ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ಮಾರ್ಚ್ 16 ರಿಂದ ಆರಂಭವಾಗಿ ಮಾರ್ಚ್ 18ರಂದು ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅಬ್ದುಲ್ ಲತೀಫ್ ಸಹದಿ ಪಯಸ್ವಿ ಭಾಗವಹಿಸಿದ್ದರು. ದುವಾ ಕಾರ್ಯಕ್ರಮದ ನೇತೃತ್ವವನ್ನು ಸೈಯದ್ ಬಾಯಾರ್ ತಂಙಳ್ ನೆರವೇರಿಸಿ ಮನುಷ್ಯರು ವಂಚನೆ, ದ್ವೇಷ, ಕಠೋರತನ ಮುಂತಾದ ದುರ್ಬುದ್ಧಿಗಳಿಂದ ದೂರ ಸರಿದು ಅಲ್ಲಾಹನ ಮತ್ತು ಮೊಹಮ್ಮದ್ ಪೈಗಂಬರ್ ರವರ ಇಷ್ಟ ದಾಸರಾಗಿ ಜೀವನ ನಡೆಸಿದರೆ ಇಹಲೋಕ ಮತ್ತು ಪರಲೋಕದಲ್ಲಿ ವಿಜಯಿಸಲು ಸಾಧ್ಯ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷ ಅಬ್ದುಲ್ ಕರೀಮ್, ಗೌರವಾಧ್ಯಕ್ಷ ಇಬ್ರಾಹಿಂ ಫೈಝಿ , ಸೈಯದ್ ಜೈನುಲ್ ಆಬಿದೀನ್ ತಂಙಳ್ ಜಯನಗರ, ಸೈಯದ್ ತಾಹಿರ್ ತಂಙಳ್ ,ಬದ್ರಿಯಾ ಜುಮಾ ಮಸ್ಜಿದ್ ಪೈಚಾರ್ ಖತೀಬರಾದ ಮುನೀರ್ ಸಖಾಫಿ ವಿರಾಜಪೇಟೆ, ಅಧ್ಯಕ್ಷ ಅಬ್ಬಾಸ್ ಪಿ, ಕಾರ್ಯದರ್ಶಿ ಅಬ್ದುಲ್ ರಝಾಕ್ , ಸದರ್ ಮುಅಲ್ಲಿಂ ಮೊಹಿಯದ್ದೀನ್ ಲತೀಫಿ, ಸಲಾಂ ಮುಸ್ಲಿಯಾರ್, ಅನ್ಸಾರಿಯ ಜುಮಾ ಮಸ್ಜಿದ್ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಅಬ್ದುಲ್ ರಶೀದ್ ಝೈನಿ ಮೊಗರ್ಪಣೆ,ತೌಸೀಫ್ ಸಹದಿ ಹರೇಕಳ, ಅಬ್ದುಲ್ ಖಾದರ್ ಫೈಝಿ, ಬೆಳ್ಳಾರೆ ಗ್ರಾ ಪಂ ಸದಸ್ಯ ರಶೀದ್ ಬೆಳ್ಳಾರೆ, ದ ಕ ಜಿಲ್ಲಾ ವಕ್ಸ್ ಬೋರ್ಡ್ ಸದಸ್ಯ ಹಾಜಿ ಮುಸ್ತಫಾ ಜನತಾ, ಜಾಲ್ಸೂರು ಅಡ್ಕಾರ್ ಜುಮಾ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ಕದಿಕಡ್ಕ, ಅಡ್ವಕೇಟ್ ಮೂಸಾ ಪೈಂಬೆಚಾಲು, ಮೊದಲಾದವರು ಉಪಸ್ಥಿತರಿದ್ದರು. ಸಂಘಟನೆಯ ಪದಾಧಿಕಾರಿಗಳಾದ ಅಶ್ರಫ್ ಪೈಚಾರ್, ಸಾಲಿ ಪೈಚಾರ್, ಮುಜೀಬ್, ಸತ್ತಾರ್ ಪೈಚಾರ್, ಹನೀಫ್ ಪಿ ಕೆ , ಮೊದಲಾದವರು ಸಹಕರಿಸಿದರು.