ಪೊಲೀಸ್ ಇಲಾಖೆ ವತಿಯಿಂದ ಹಾಕಿದ್ದ ಗುತ್ತಿಗಾರಿನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗೆ ಬಣ್ಣ ಬಳಿದು ದುರಸ್ತಿ ಮಾಡಿದ ಹಾಗೂ ಸ್ಟಿಕ್ಕರ್ ಅಳವಡಿಸಿದ ಕಾರಣಕ್ಕೆ ಬಿ.ಎಂ.ಎಸ್. ಅಟೋ ನಿಲ್ದಾಣಕ್ಕೆ ಭೇಟಿ ನೀಡಿದ ಸುಬ್ರಹ್ಮಣ್ಯ ಎಸ್ಐ ಓಮನರವರು ಮೆಚ್ಚುಗೆ ಸೂಚಿಸಿದ್ದಾರೆ.
ಗುತ್ತಿಗಾರಿನ ರಿಕ್ಷಾ ಚಾಲಕರು ಮತ್ತು ನೂತನ ಎಸ್ಐ ಪ್ರದೀಪ್ ಕೊಲ್ಯ ಅಭಿಮಾನಿಗಳು ಗುತ್ತಿಗಾರು ರಿಕ್ಷಾ ನಿಲ್ದಾಣ ಬಳಿ ಪೇಯಿಂಟ್, ದುರಸ್ತಿ, ಸ್ಟಿಕ್ಕರ್ ವಿಚಾರಕ್ಕೆ ಸುಬ್ರಮಣ್ಯ ಠಾಣಾಧಿಕಾರಿ ಓಮನರವರು ಸ್ವತಃ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ವಿಜೇತರಾದ ಠಾಣಾಧಿಕಾರಿ ಓಮನರವರನ್ನು ರಿಕ್ಷಾ ಚಾಲಕರು ಗೌರವಿಸಿದರು. ಈ ಸಂದರ್ಭದಲ್ಲಿ ಪ್ರದೀಪ್ ಕೊಲ್ಯರಿಗೆ ಅಭಿನಂದನೆಯ ಬೃಹತ್ ಕಟೌಟ್ ಹಾಕಿದ ಅಭಿಮಾನಿ ಬಳಗ ಮತ್ತು ರಿಕ್ಷಾ ಚಾಲಕರ ಸಂಘದ ಕಾರ್ಯಕ್ಕೆ ಎಸ್ಐಯವರು ಶ್ಲಾಘಿಸಿ, ರಾಜ್ಯಕ್ಕೆ ಮಾದರಿ, ಇದೊಂದು ಅವಿಸ್ಮರಣೀಯ ಕೆಲಸ ಎಂದು ಹೂಗುಚ್ಛ ನೀಡಿ ಅಭಿನಂದಿಸಿದರು.
ಜಾತ್ರೆ ಮತ್ತು ಇತರ ಕಾರ್ಯಕ್ರಮಗಳ ಉಪಯೋಗಕ್ಕೆ ಹೆಚ್ಚುವರಿ ಬ್ಯಾರಿಕೇಡ್ನ್ನು ಇಲಾಖೆ ವತಿಯಿಂದ ನೀಡಬೇಕು ಎಂದು ರಿಕ್ಷಾ ಚಾಲಕರ ಸಂಘದ ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಓಮನರವರು ಚಾಲಕರಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಉದಯ ಕುಮಾರ್ ಹಾಲೆಮಜಲು, ಪದಾಧಿಕಾರಿಗಳಾದ ಪೇರಪ್ಪ ಗೌಡ, ಗಿರೀಶ್ ಪಾರೆಪ್ಪಾಡಿ, ವಸಂತ ಚತ್ರಪ್ಪಾಡಿ, ರಾಜೇಶ್ ಉತ್ರಂಬೆ, ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ, ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಉದ್ಯಮಿ ವಿನ್ಯಾಸ್ ಕೊಚ್ಚಿ ಮತ್ತು ಸಂಘದ ಸದಸ್ಯರು ಹಾಜರಿದ್ದರು, ಸಂಘಟನಾ ಕಾರ್ಯದರ್ಶಿ, ಪ್ರದೀಪ್ ಅಭಿಮಾನಿ ಬಳಗದ ಪ್ರಮುಖರಾದ ಚಂದ್ರಶೇಖರ್ ಕಡೋಡಿ ಕಾರ್ಯಕ್ರಮ ನಿರೂಪಿಸಿದರು.