ಐನೆಕಿದು ಗ್ರಾಮದ ಮೂರು ಕಡೆ ಕಾಂಕ್ರೀಟ್ ರಸ್ತೆಯನ್ನು ಮಾ.19 ರಂದು ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಉದ್ಘಾಟಿಸಿದರು.
ದೇವರಹಳ್ಳಿ – ಕುಜುಂಬಾರು – ಇಜಿನಡ್ಕ 2.80 ಲಕ್ಷ, ದೇವರಹಳ್ಳಿ – ಉಪ್ಪಳಿಕೆ – ಪೈಲಾಜೆ ರಸ್ತೆ 2.00 ಲಕ್ಷ, ನೂಜಿಬೆಟ್ಟು – ಕತ್ತಿಮಜಲು 2.00 ಲಕ್ಷ ಜಿ.ಪಂ ಅನುದಾನ ಉಪಯೋಗಿಸಿ ಕಾಂಕ್ರೀಟ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಸದಸ್ಯರಾದ ಗಿರೀಶ್ ಆಚಾರ್ಯ ಪೈಲಾಜೆ ಹಾಗೂ ಭಾರತಿ ಮೂಕಮಲೆ, ಕಿಶೋರ್ ಕೂಜುಗೋಡು, ನವೀನ್ ಕಟ್ರಮನೆ, ಕಿರಣ್ ಪೈಲಾಜೆ ಮತ್ತಿತರರು ಉಪಸ್ಥಿತರಿದ್ದರು.