Breaking News

ನಾಳೆ ಚೆಂಬು ಗ್ರಾಮದಲ್ಲಿ ತಹಶೀಲ್ದಾರರಿಂದ ಗ್ರಾಮ ವಾಸ್ತವ್ಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆಗೆ ಕಾರ್ಯಕ್ರಮದಂತೆ ತಹಶೀಲ್ದಾರರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ, ವಾಸ್ತವ್ಯ ಮಾಡಿ ರೈತರ ದಾಖಲೆಗಳು ಹಾಗೂ ಸೇವೆಯನ್ನು ಪರಿಶೀಲಿಸಿ ಪರಿಹಾರಗಳಿಗೆ ಕ್ರಮಕೈಗೊಳ್ಳಲಿದ್ದಾರೆ.
ಆ ದಿಸೆಯಲ್ಲಿ ಸಂಪಾಜೆ ಹೋಬಳಿಯ ಚೆಂಬು ಗ್ರಾಮ ಪಂಚಾಯಿತಿಗೆ ನಾಳೆ ಬೆಳಗ್ಗೆ ೧೦ ಗಂಟೆಯಿಂದ ಮಡಿಕೇರಿ ತಾಲ್ಲೂಕು ತಹಶೀಲ್ದಾರರಾದ ಮಹೇಶ್ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪಹಣಿ ದಾಖಲೆಗಳ ತಿದ್ದುಪಡಿ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯಗಳು, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯಗಳು, ಆಹಾರ ಪಡಿತರ ಚೀಟಿಗೆ ಸಂಬಂಧಿಸಿದ ವಿಷಯಗಳು, ಪೋಡಿ/ ಅಳತೆ ವಿಚಾರಕ್ಕೆ ಸಂಬಂಧಿಸಿದ ವಿಷಯಗಳು, ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ ವಿಷಯಗಳು, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಆಧಾರ ಕಾರ್ಡಿಗೆ ಸಂಬಂಧಿಸಿದ ವಿಷಯಗಳು, ನಾಡ ಕಚೇರಿ/ಎ.ಜೆ.ಎಸ್.ಕೆ. ಕೇಂದ್ರಗಳಲ್ಲಿ ನೀಡುವ ಸೇವೆಗಳ ಕುರಿತು, ಅತಿವೃಷ್ಟಿ ಪರಿಹಾರ ವಿಚಾರಗಳು, ಗ್ರಾಮದ ಸಮಸ್ಯೆಗಳ ಇತರೆ ವಿಷಯಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಿ ಸಾದ್ಯವಾದಷ್ಟು ಸ್ಥಳದಲ್ಲೇ ಅಂತಿಮ ವಿಲೇವಾರಿ/ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಕ್ರಮವಹಿಸಲಿದ್ದಾರೆ ಎಂದು ತಾಲ್ಲೂಕು ತಹಶೀಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.