ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ನ ಎಂ. ಬಿ .ಎ ವಿಭಾಗದ ಪ್ರಾಧ್ಯಾಪಕ ಧರ್ಮಾನಂದ ಮೋಂಟಡ್ಕ ರವರು ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಎಂ .ಬಿ. ಎ ವಿಭಾಗದ ಪ್ರೊಫೆಸರ್ ಡಾ| ಅಂಜಲಿ ಗಣೇಶ್ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
(A Preference of Savings and Consumption amongst the employees in Public Sector and Private Sector Enterprises : A Comparative Study in Dakshina Kannada District, Karnataka) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ.
ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿರುವ ಇವರು ಸುಮಾರು 22 ವರ್ಷಗಳ ಕಾಲ ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೋಕ್ತೆಸರರಾಗಿದ್ದ ಮೋಂಟಡ್ಕ ದಿ. ಜನಾರ್ಧನ ಗೌಡ ಹಾಗೂ ಶ್ರೀಮತಿ ಸಾವಿತ್ರಿ ಜನಾರ್ಧನ ಗೌಡ ದಂಪತಿಯ ಪುತ್ರ.