Breaking News

ದುಗಲಡ್ಕ ದುಗ್ಗಲಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಧಾರ್ಮಿಕ ಸಭೆ- ಸನ್ಮಾನ ಕಾರ್ಯಕ್ರಮ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಅಂಗವಾಗಿ ಧಾರ್ಮಿಕ ಸಭೆ ಮಾ.19 ರಾತ್ರಿ ನಡೆಯಿತು.
ಧಾರ್ಮಿಕ ಉಪನ್ಯಾಸವನ್ನು ನೀಡಿದ ಕುಂಟಾರು ರವೀಶ ತಂತ್ರಿಗಳು ಮಾತನಾಡಿ ನಮ್ಮ ಶರೀರವೇ ದೇವಾಲಯ ಹೃದಯವೇ ದೇವರು,ಹಿಂದೂ ಸಂಸ್ಕೃತಿಯಲ್ಲಿ ಎಲ್ಲರನ್ನೂ ಒಂದೇ ಎನ್ನುವ ವಿಶಾಲವಾದ ಹೃದಯವಿದೆ.ಹಿಂದುಗಳ ಭಾವನೆಗೆ,ಸಂಸ್ಕೃತಿಗೆ ನಡೆಯುವ ಆಕ್ರಮನವನ್ನು ಎಂದೂ ಸಹಿಸಲು ಸಾಧ್ಯವಿಲ್ಲ.ಎಂದು ಹೇಳಿದರು.

 


ಸುಳ್ಯ ಕ್ಷೇತ್ರದ ಶಾಸಕರಾಗಿ ಮೀನುಗಾರಿಕೆ,ಬಂದರು ಖಾತೆಯ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಅಂಗಾರ ರವರನ್ನು ಹಾಗೂ ಹಿರಿಯ ಯಕ್ಷಗಾನ ಕಲಾವಿದ ಹಾಗೂ ನಾಟ್ಯಗುರುಗಳಾದ ಬಾಲಕೃಷ್ಣ ನಾಯರ್ ದುಗಲಡ್ಕ ರವರನ್ನು ಸನ್ಮಾನಿಸಲಾಯಿತು.

ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿ,ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ ಮಾತನಾಡಿದರು.


ಸಚಿವ ಅಂಗಾರರವರು ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ದುಗ್ಗಲಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದಯೋನ್ಮುಖ ಚಿತ್ರ ಕಲಾವಿದ ಅಮೃತ್ ಸಾಲಿಯಾನ್ ರಚಿಸಿದ ರುಧಿರ ಚಾಮುಂಡಿ ದೈವದ ಕಲಾಕೃತಿ ಯನ್ನು ದೈವಸ್ಥಾನಕ್ಕೆ ಸಮರ್ಪಿಸಲಾಯಿತು.ಸಚಿವ ಅಂಗಾರರ ಕಲಾಕೃತಿಯನ್ನೂ ಸಚಿವರಿಗೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯರುಗಳಾದ ಲೋಹಿತ್ ಮಾಣಿಬೆಟ್ಟು ಸ್ವಾಗತಿಸಿ, ಯತೀಶ್ ರೈ ದುಗಲಡ್ಕ ವಂದಿಸಿದರು.

ಗಿರೀಶ್ ಕುಂಟಿನಿ ಮತ್ತು ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ರುಧಿರ ಚಾಮುಂಡಿ ದೈವದ ನೇಮೋತ್ಸವ ನಡೆದು,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.