ಬಾಂಗ್ ಕೊಡುವ ವಿಚಾರದಲ್ಲಿ ಸರಕಾರದ ಸುತ್ತೋಲೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮುಸ್ಲಿಂ ಸಮುದಾಯದ ಮೇಲೆ ಸರಕಾರದ ತಾತ್ಸಾರ ಮನೋಭಾವ – ಖಂಡನೆ

ಮಸೀದಿಗಳಲ್ಲಿ ಬಾಂಗ್ ಕೊಡುವ ವಿಚಾರದಲ್ಲಿ ಸರಕಾರ ಹೊರಡಿಸಿರುವ ಸುತ್ತೋಲೆ ಸರಿಯಲ್ಲ. ಧಾರ್ಮಿಕ ಸ್ವಾತಂತ್ರ್ಯ ಕ್ಕೆ ಧಕ್ಕೆಯನ್ನುಂಟುಮಾಡುವ ಸರಕಾರದ ಕ್ರಮವನ್ನು ಖಂಡಿಸುವ ಜತೆಗೆ ಈ ಕುರಿತು ಚರ್ಚೆ ನಡೆದು ಮುಂದಿನ ಕ್ರಮ ಆಗಬೇಕೆಂದು ನಾವು ಒತ್ತಾಯಿಸುವುದಾಗಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ಹೇಳಿದ್ದಾರೆ.

ಮಾ.20 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೈಕ್ ಮೂಲಕ ಬಾಂಗ್ ಕೊಡದಂತೆ ವಕ್ಫ್ ಬೋರ್ಡ್ ಮೂಲಕ ಸರಕಾರ ಮಾಡುತ್ತಿದೆ. ಈ ಹಿಂದೆಯೂ ಈ ಕುರಿತು ಸರಕಾರ ಒಂದು ಆದೇಶ ಹೊರಡಿಸಿತ್ತು. ಇದರ ಸಾಧಕ ಬಾದಕಗಳ ಕುರಿತು ವಕ್ಫ್ ಬೋರ್ಡ್ ಕೂಡಾ ಚರ್ಚೆ ಮಾಡದೇ ಬೆಂಬಲ ನೀಡುತ್ತಿದ್ದಾರೆ ಇದು ಸರಿಯಲ್ಲ. ಸರಕಾರ ಹೊರಡಿಸಿದ ಸುತ್ತೋಲೆ ಪರಾಮರ್ಶೆ ಮಾಡಬೇಕೆಂದು ಈಗಾಗಲೇ ಮಾಜಿ ಸಚಿವರುಗಳಾದ ಯು.ಟಿ.ಖಾದರ್ ಹಾಗೂ ಜಮೀರ್ ಅಹಮದ್ ರವರು ಸರಕಾರವನ್ನು ಕೇಳಿಕೊಂಡಿದ್ದಾರೆ ಎಂದು ಹೇಳಿದ ಅವರು, ಬಾಂಗ್ ನ ಶಬ್ದ ಕಡಿಮೆ ಮಾಡುವುದಿದ್ದರೆ ಮಾಡಲಿ. ಯಾರಿಗೂ ತೊಂದರೆಯಾಗದಂತೆ ಪ್ರಾರ್ಥನೆ ಮಾಡಬೇಕೆಂದು ಇಸ್ಲಾಂ ಧರ್ಮದಲ್ಲಿ ಇದೆ. ಚರ್ಚೆಗೆ ಅವಕಾಶ ನೀಡಲಿ ಎಂದು ಅವರು ಒತ್ತಾಯಿಸಿದರು.

ಈಗಿನ ಬಿಜೆಪಿ ಬಜೆಟ್ ನಲ್ಲಿಯೂ ಅಲ್ಪಸಂಖ್ಯಾತ ಅಭಿವೃದ್ಧಿ ಗೆ ಹೇಳಿದಷ್ಟು ಅನುದಾನ ನೀಡಿಲ್ಲ. ಉನ್ನತ ವಿದ್ಯಾಭ್ಯಾಸದ ಅನುದಾನಕ್ಕೂ ಕತ್ತರಿ ಹಾಕಿದೆ. ಮದ್ರಸ ಆಧುನೀಕರಣದ ಅನುದಾನ ದಲ್ಲೂ ಕಡಿತ ಮಾಡಲಾಗಿದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಲ್ಪಸಂಖ್ಯಾತ ರನ್ನು ಧಮನಿಸುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ವಿಮಾನ, ರೈಲ್ವೆ ಇನ್ನಿತರ ವ್ಯವಸ್ಥೆಯನ್ನು ಖಾಸಗೀಕರಣ ಮಾಡಿದಂತೆ ಈಗ ಎಲ್ ಐ ಸಿ ಯನ್ನು ಕೂಡಾ ಖಾಸಗೀಕರಣ ಮಾಡಲು ಹೊರಟಿರುವುದು ದುರಾದೃಷ್ಟಕರ ಎಂದು ಶಹೀದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಾಜ್ ಮಹಮ್ಮದ್ ಸಂಪಾಜೆ, ರಿಯಾಜ್ ಕಲ್ಲುಗುಂಡಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಆಶಿಕ್ ಕುಕ್ಕುಂಬಳ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.